ಪೆರಾಜೆ ಚಿಗುರು ಕ್ರೀಡಾ- ಕಲಾ ಯುವಕ ಮಂಡಲದಿಂದ ಅಡ್ಕಾರ್ ವನವಾಸಿ ಕಲ್ಯಾಣ ವಿದ್ಯಾರ್ಥಿ ನಿಲಯದಲ್ಲಿ ಶ್ರಮದಾನ

0

 

ಪೆರಾಜೆ ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲ ಇದರ ಮಾಸಿಕ ಶ್ರಮದಾನವು ಅಡ್ಕಾರ್ ವನವಾಸಿ ಕಲ್ಯಾಣ ಬಾಲಕರ ವಸತಿ ನಿಲಯದಲ್ಲಿ ನಡೆಯಿತು.
ಶ್ರಮದಾನದಲ್ಲಿ ಚಿಗುರು ಯುವಕಮಂಡಲದ ಅಧ್ಯಕ್ಷ ಭುವನ್ ಕುಂಬಳಚೇರಿ, ಕಾರ್ಯದರ್ಶಿ ಜೀವನ್ ಮಜಿಕೋಡಿ, ಖಜಾಂಜಿ ಪ್ರವೀಣ್ ಮಜಿಕೋಡಿ, ಮಾಜಿ ಅಧ್ಯಕ್ಷ ಶೀತಲ್ ಕುಂಬಳಚೇರಿ,ಪೆರಾಜೆ ಗ್ರಾಮಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ಹಾಗೂ ಸಂಘದ ಸದಸ್ಯರು ಮತ್ತು ವನವಾಸಿ ಕಲ್ಯಾಣ ನಿಲಯದ ಅಧ್ಯಕ್ಷ ಡಾ. ಚಂದ್ರಶೇಖರ್, ಶ್ರೀನಿವಾಸ್ ಉಬರಡ್ಕ, ಗುರುರಾಜ್ ಭಟ್ ಅಡ್ಕಾರ್ ಮತ್ತು ಚಂದ್ರಶೇಖರ ದೊಡ್ಡೇರಿ ಭಾಗವಹಿಸಿದರು. ಬೆಳಿಗ್ಗಿನ ಉಪಹಾರ ಮತ್ತು ಮಧ್ಯಾಹ್ನ ದ ಊಟವನ್ನು ವನವಾಸಿ ವಸತಿ ನಿಲಯದ ಆಡಳಿತ ಮಂಡಳಿ ವತಿಯಿಂದ ನೀಡಲಾಯಿತು.

LEAVE A REPLY

Please enter your comment!
Please enter your name here