ಪ್ರಣನ್ಯ ಕುದ್ಪಾಜೆಗೆ ಕುದ್ಪಾಜೆ ಕುಟುಂಬದಿಂದ ಗೌರವ

0

ಝೀ ಕನ್ನಡ ಚಾನೆಲ್ ಏರ್ಪಡಿಸಿದ್ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ -೬ನೇ ರಿಯಾಲಿಟಿ ಶೋನಲ್ಲಿ ಎರಡನೇ ರನ್ನರ್ ಅಪ್ ಬಹುಮಾನ ಗೆದ್ದ ಸುಳ್ಯದ ಪ್ರತಿಭೆ ಪ್ರಣನ್ಯ ಕುದ್ಪಾಜೆಯನ್ನು ಕುದ್ಪಾಜೆ ಕುಟುಂಬಸ್ಥರು ಇಂದು ಮೆರವಣಿಗೆಯಲ್ಲಿ ಕರೆದೊಯ್ದು ಸನ್ಮಾನಿಸಿ ಪ್ರೀತಿ ತೋರಿದರು.

ಸುಳ್ಯದ ಜಟ್ಟಿಪಳ್ಳ ಕ್ರಾಸ್ ನಲ್ಲಿರುವ ಮಾಧವ ಕುದ್ಪಾಜೆ ಯವರ ಅಂಗಡಿಯ ಬಳಿಯಿಂದ ಕೊಡಿಯಾಲಬೈಲಿನಲ್ಲಿರುವ ಕುದ್ಪಾಜೆ ಸೋಮಯ್ಯ ಮಾಸ್ತರ್ ರವರ ಮನೆಯ ವರೆಗೆ ತೆರೆದ ಜೀಪಿನಲ್ಲಿ ಪ್ರಣ ನ್ಯಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಸೋಮಯ್ಯ ಮಾಸ್ಟರ್ ರವರ ಮನೆಯಲ್ಲಿ ಆಕೆಯನ್ನು ಶಾಲು, ಹಾರ, ಪೇಟ ತೊಡಿಸಿ ಸನ್ಮಾನಿಸಲಾಯಿತು. 50 ಸಾವಿರ ರೂಪಾಯಿ ನಗದು ಕೊಟ್ಟು ಸತ್ಕರಿಸಲಾಯಿತು.


ಕುದ್ಪಾಜೆ ಶಿವಪ್ಪಗೌಡರು, ಕುದ್ಪಾಜೆ ಸೋಮಯ್ಯ ಮಾಸ್ತರ್, ಪ್ರಣನ್ಯಳ ತಂದೆ ರಾಧಾಕೃಷ್ಣ ಕುದ್ಪಾಜೆ, ತಾಯಿ ನಶ್ಮಿತಾ, ಸಂಜೀವ ಕುದ್ಪಾಜೆ, ಹರಿಪ್ರಸಾದ್ ಕುದ್ಪಾಜೆ, ಹೀಗೆ ಕುದ್ಪಾಜೆ ಕುಟುಂಬದ ಬಹುತೇಕ ಮಂದಿ ಸಕುಟುಂಬಿಕರಾಗಿ ಬಂದು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here