ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್

0

 

 

ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಒದಗಿಸುತ್ತಿದ್ದು, ಫಲಾನುಭವಿಗಳು ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಸೆಂಟರ್ ಗಳಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಬಸ್ ಪಾಸನ್ನು ಪಡೆದುಕೊಳ್ಳಬಹುದು.
ಆರಂಭಿಕ ಸ್ಥಳದಿಂದ 7 ಹಂತಗಳವರೆಗೆ ( 45 ಕಿ.ಮೀ) ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಸದರಿ ಪಾಸ್ ದಾರರು ಕ.ರಾ.ರ.ಸಾ.ನಿಗಮ, ವಾ.ಕ.ರ.ಸಾ.ನಿಗಮ, ಕ.ಕ.ರ.ಸಾ.ನಿಗಮದ ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶವಿದ್ದು, ಪಾಸ್ ದಾರರು ಮೂಲ ಪಾಸ್ ಗಳನ್ನು ಮಾತ್ರ ಜತೆಯಲ್ಲಿಟ್ಟು ಪ್ರಯಾಣಿಸುವುದು ಕಡ್ಡಾಯವಾಗಿದೆ. ಪಾಸ್ ನಕಲು ಪ್ರತಿ, ಕಲರ್ ಝೆರಾಕ್ಸ್ ಪಾಸ್ ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಬಸ್ ಪಾಸ್ ಪಡೆಯುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆಯ ಉಚಿತ ಸಹಾಯವಾಣಿ ಸಂಖೆ 155214 ನ್ನು ಸಂಪರ್ಕಿಸಬಹುದು. ಎಂದು ನಿಗಮದ ಸುಳ್ಯ ಘಟಕದ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here