ಸಂಪಾಜೆ : ವಿವಿಧ ಕಾಮಗಾರಿಗಳ ಉದ್ಘಾಟನೆ

0

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಅ. 7 ರಂದು ನಡೆಯಿತು.
ಕೊರಂಬಡ್ಕ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾದ ದರ್ಕಾಸ್ ಕೊರಂಬಡ್ಕ ರಸ್ತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಉದ್ಘಾಟನೆ ಮಾಡಿ ಈ ಭಾಗದ ಜನರು ಜನ ಸ್ಪಂದನ ಕಾರ್ಯಕ್ರಮದಲ್ಲಿ ಇಟ್ಟ ಬೇಡಿಕೆ ಸಕಾಲದಲ್ಲಿ ಪರಿಹಾರ ಮಾಡುವ ಮೂಲಕ ಗ್ರಾಮ ಪಂಚಾಯತ್ ಆಡಳಿತ ಸ್ಪಂದಿಸಿದೆ. ಅದರ ಜೊತೆಗೆ ಈ ರಸ್ತೆ ಅಗಲೀಕರಣ ಮಾಡಲು ಸಹಕರಿಸಿದ ಬಂಗರಾ ಇಂಡಸ್ಟ್ರೀಸ್ ಮಾಲಕ ಅಬೂಬಕ್ಕರ್, ದುಬೈ ಖಾದರ್, ಸೀತಮ್ಮ ದೇವಯ್ಯ ಇವರಿಗೆ ಅಭಿನಂದನೆ ಸಲ್ಲಿಸಿದರು.
ಕೊಪ್ಪತಕಜೆ ಭಾಗದ ಜನರ ಬಹು ಮುಖ್ಯ ಬೇಡಿಕೆಯಾದ ಕೊಪ್ಪತಕಜೆ ಕಾಂಕ್ರಿಟ್ ರಸ್ತೆಯನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸುಂದರಿ ಮುಂಡಡ್ಕ, ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಸುಮತಿ ಶಕ್ತಿವೇಲು, ಅನುಪಮಾ, ವಿಮಲಾ, ಜಂಟಿಯಾಗಿ ಉದ್ಘಾಟನೆ ಮಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಗದೀಶ್ ರೈ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.. ಎಮ್. ಶಾಹಿದ್ ತೆಕ್ಕಿಲ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದ ಕಟ್ಟೆ, ಸೊಸೈಟಿ ನಿರ್ದೇಶಕರಾದ ಗಣಪತಿ ಭಟ್, ಸತ್ಯನಾರಾಯಣ ಭಟ್, ಗೂನಡ್ಕ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ಲ ಹಾಜಿ, ವಾರ್ಡ್ ಸದಸ್ಯರಾದ ಅಬೂಸಾಲಿ ಸ್ವಾಗತಿಸಿ, ಸವಾದ್ ವಂದಿಸಿದರು. ಇದೇ ಸಂದರ್ಭದಲ್ಲಿ ಪೆಲ್ತಡ್ಕ ಕೊಪ್ಪತಕಜೆ ಭಾಗದ ಕಾಂಕ್ರಿಟ್ ಕಾಮಗಾರಿಗೆ ಕ್ಷೇತ್ರದ ಸದಸ್ಯರುಗಳಾದ ಅಬೂಸಾಲಿ ಗೂನಡ್ಕ ಹಾಗೂ ಸವಾದ್ ಗೂನಡ್ಕ, ದಿನಕರ ಸಣ್ಣ ಮನೆ, ಗಣಪತಿ ಭಟ್, ಸತ್ಯ ನಾರಾಯಣ ಭಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಊರ ಪಲಾನುಭವಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here