ಅ.22: ವಿಟ್ಲದಲ್ಲಿ ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ವತಿಯಿಂದ ಗುರುವಂದನಾ ಕುಟುಂಬ ಸಮ್ಮಿಲನ ಕಾರ್ಯಕ್ರಮ ಹಿನ್ನೆಲೆ

0

ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ತರವಾಡು ಟ್ರಸ್ಟ್ ವತಿಯಿಂದ ಪತ್ರಿಕಾಗೋಷ್ಠಿ

ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ವತಿಯಿಂದ ಆದಿಚುಂಚನಗಿರಿ ಮಠದ ಪರಮಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಗುರುವಂದನಾ ಕುಟುಂಬ ಸಮ್ಮಿಲನವು ಅ.22ರಂದು ವಿಟ್ಲದ ಅಕ್ಷಯ ಸಭಾಭವನದಲ್ಲಿ ಜರುಗಲಿದ್ದು, ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ತರವಾಡು ಟ್ರಸ್ಟ್ ವತಿಯಿಂದ ಅ.11ರಂದು ಪತ್ರಿಕಾಗೋಷ್ಠಿ ನಡೆಸಲಾಯಿತು.

ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ನ ಟ್ರಸ್ಟಿ ರಾಧಾಕೃಷ್ಣ ಮೂರ್ಜೆ ಅವರು ಅ.22ರಂದು ನಡೆಯಲಿರುವ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು‌.
ಈ ಸಂದರ್ಭದಲ್ಲಿ ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ಅಧ್ಯಕ್ಷ ಕೆ. ಎಸ್. ಗೋಪಾಲಕೃಷ್ಣ ಗೌಡ ಮೂರ್ಜೆ, ಪ್ರಧಾನ ಕಾರ್ಯದರ್ಶಿ ಹರೀಶ್ ಮೂರ್ಜೆ, ಉಪಾಧ್ಯಕ್ಷ ನವೀನ್ ಮುರೂರು, ತರವಾಡು ಟ್ರಸ್ಟಿ ಕೇಶವ ಕೊಡಿಂಜ, ಸತೀಶ್ ಕೆ.ಜೆ., ಸನತ್ ಕೆ.ಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here