ಮೈಸೂರಿನಲ್ಲಿ ನಡೆದ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್ ಸ್ಪರ್ಧೆ

0

ಸುಳ್ಯ ರಂಗ ಮಯೂರಿ ಕಲಾ ಶಾಲೆಯ ನೃತ್ಯ ಕಲಾವಿದರು ರಾಜ್ಯಮಟ್ಟಕ್ಕೆ ಆಯ್ಕೆ

 

 

ಮೈಸೂರಿನಲ್ಲಿ
ಜಿಲ್ಲಾ ಸ್ಪೋರ್ಟ್ಸ್ ಡ್ಯಾನ್ಸ್ ಅಸೊಶಿಯೇಶನ್ ವತಿಯಿಂದ ಜೋನಲ್ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್ -2022 ರ ಡ್ಯಾನ್ಸ್ ಸ್ಪರ್ಧೆಯಲ್ಲಿ ಸುಳ್ಯ ರಂಗಮಯೂರಿ ಕಲಾ ಶಾಲೆಯ ಕಲಾವಿದರು ಸಮಗ್ರ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಮೈಸೂರಿನ ಶಾರದಾ ವಿಲಾಸದಲ್ಲಿ ಅ. 09 ರಂದು ಡ್ಯಾನ್ಸ್ ಸ್ಪರ್ಧೆಯು ವಿವಿಧ ವಿಭಾಗಗಳಲ್ಲಿ ನಡೆಯಿತು.


ವಲಯ ಮಟ್ಟದ ವಯೋಮಿತಿ ಅನುಗುಣವಾಗಿ ಎಲ್ಲಾ ನೃತ್ಯ ಕಲಾವಿದರುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕ್ಲಾಸಿಕಲ್, ಜಾನಪದ, ಫ್ರೀ ಡ್ಯಾನ್ಸ್, ಬ್ಯಾಟಲ್ ಡ್ಯಾನ್ಸ್, ಅಲ್ಲದೆ ಸೋಲೋ, ಕಪಲ್ ಡ್ಯಾನ್ಸ್ ಹಾಗೂ ಗ್ರೂಪ್ ಡ್ಯಾನ್ಸ್ ಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.
ಸುಳ್ಯದ ರಂಗಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳು ಒಟ್ಟು 4 ಚಿನ್ನದ ಪದಕ ಹಾಗೂ ಒಂದು ಒಂದು ಬೆಳ್ಳಿಯ ಪದಕವನ್ನು ಗಳಿಸಿಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಸ್ತ್ರೀಯ ನೃತ್ಯದಲ್ಲಿ ಸನಿಹ ಶೆಟ್ಟಿ ಸುಳ್ಯ ಪ್ರಥಮ,9 ವರ್ಷ ವಯೋಮಿತಿಯ ಫ್ರೀ ಸ್ಟೈಲ್ ಗ್ರೂಪ್ ಡ್ಯಾನ್ಸ್ ನಲ್ಲಿ ಪ್ರಾಪ್ತಿ ಎ.ಆರ್, ಚಕ್ಷು ಗೌಡ, ಕಾರುಣ್ಯ, ಅಹನಾ, ಮನಸ್ವಿ ಪಿ.ಎಂ, ಕೃತಿಕಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
15ವರ್ಷವಯೋಮಿತಿಯ ಕಪಲ್ ಡ್ಯಾನ್ಸ್ ನಲ್ಲಿ ಸಿಂಚನಾ ಎನ್.ಪಿ ಮತ್ತು ಸನಿಹ ಶೆಟ್ಟಿ ಪ್ರಥಮ ಸ್ಥಾನ,12 ವರ್ಷ ವಯೋಮಿತಿಯ ಫ್ರೀ ಸ್ಟೈಲ್ ಗ್ರೂಪ್ ಡ್ಯಾನ್ಸ್ ನಲ್ಲಿ ಖುಷಿ ಮೆತ್ತಡ್ಕ, ಶಾರ್ವರಿ, ಸಮೃದ್ಧಿ, ಭೂಷಿತ, ಕಿಶನ್ , ಇಶಾನ್, ಲಕ್ಷ್ಯ, ಮಾನ್ವಿ, ದೀಕ್ಷಾ, ಕೌಶಿಕ್ ತಂಡ ಪ್ರಥಮ ಮತ್ತು 15 ವರ್ಷ ವಯೋಮಿತಿಯ ಫ್ರೀ ಸ್ಟೈಲ್ ಗ್ರೂಪ್ ಡ್ಯಾನ್ಸ್ ನಲ್ಲಿ ಸನಿಹ ಶೆಟ್ಟಿ, ಸಿಂಚನಾ ಎನ್.ಪಿ, ಶ್ರೇಯಾ, ಯಜ್ಞ, ತನಿಶ್ ಅಡ್ತಲೆ, ಐಶಾನ್ಯ, ಸೃಜನಾದಿತ್ಯಶೀಲ, ವಿಹನಿ ಜಾಕೆ, ನಿಶಾ ಪ್ರಥಮ ಸ್ಥಾನವನ್ನುಪಡೆದುಕೊಂಡಿರುತ್ತಾರೆ.
ಸುಳ್ಯ ರಂಗಮಯೂರಿ ಕಲಾಶಾಲೆಯ ಡ್ಯಾನ್ಸ್ ಸಹಭಾಗಿತ್ವದ ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು ಸಮಗ್ರ ಚಾಂಪಿಯನ್ ಶಿಪ್ ನ್ನು ಪಡೆದುಕೊಂಡಿತು.
ಡ್ಯಾನ್ಸ್ ನಿರ್ದೇಶಕ ವಿನೋದ್ ಕರ್ಕೇರ, ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರಾಹುಲ್ ಎಸ್. ರಾವ್, ಪೃಥ್ವಿ ನಾಯಕ್ ಮತ್ತು ರಂಗಮಯೂರಿ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here