ಸುಳ್ಯ ರಾಮ ಮಂದಿರದ 80 ನೇ ವರ್ಷದ ಏಕಾಹ ಭಜನೆಯ ಆಮಂತ್ರಣ ಬಿಡುಗಡೆ

0

 

ಸುಳ್ಯ ಶ್ರೀ ರಾಮ್ ಪೇಟೆಯಲ್ಲಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ ನ.4. ರಂದು 80 ನೇ ವರ್ಷದ ಏಕಾಹ ಭಜನೆಯು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಅ.13 ರಂದು ಮಂದಿರದಲ್ಲಿ ನಡೆಯಿತು.
ಹಿರಿಯ ಉದ್ಯಮಿ ಶ್ರೀ ವೆಂಕಟರಮಣ ದೇವ ಮಂದಿರದ ಮೊಕ್ತೇಸರರಾದ ಕೃಷ್ಣ ಕಾಮತ್ ರವರು ಬಿಡುಗಡೆ ಮಾಡಿದರು. ಮಂದಿರದ ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು, ಪದಾಧಿಕಾರಿಗಳಾದ ಮಹಾಬಲ ಕೇರ್ಪಳ, ಭಾಸ್ಕರ ನಾಯರ್ ಅರಂಬೂರು, ಗೋಪಾಲ ನಡುಬೈಲು,ಗಣೇಶ್ ಆಚಾರ್ಯ ಸುಳ್ಯ, ವಿದ್ಯಾನಂದ ಭಟ್, ಪ್ರಭಾಕರನ್ ನಾಯರ್, ಅನಿಲ್ ಕೇರ್ಪಳ,ಮಂದಿರ ದ ಅರ್ಚಕರು, ಸಮಿತಿ ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here