ಸುಬ್ರಹ್ಮಣ್ಯ ಗ್ರಾ.ಪಂ ನ ಸುಬ್ರಹ್ಮಣ್ಯ ವಾರ್ಡ್ ನಂ.3 ರ ನೂಚಿಲ ವಾರ್ಡ್ ಗೆ ಅ. 28 ರಂದು ಚುನಾವಣೆ ನಡೆಯಲಿದೆ. ಮಾಜಿ ಗ್ರಾ.ಪಂ ಸದಸ್ಯ ದಿನೇಶ್ ರಾವ್ ನಿಧನರಾದ ಬಳಿಕ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅ.13 ರಿಂದ ನಾಮಪತ್ರ ಸಲ್ಲಿಸಲು ಆರಂಭವಾಗಿದ್ದು ಅ.18 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಆಕಾಂಕ್ಷಿ ಅಭ್ಯರ್ಥಿಗಳ ಆಯ್ಕೆ ಕಾರ್ಯ ಪ್ರಾರಂಭಿಸಿರುವುದಾಗಿ ತಿಳಿದು ಬಂದಿದೆ.