ಬೆಳ್ಳಿಪ್ಪಾಡಿ ಕೊಡಿಮರ ಅಂಗನವಾಡಿ ಕೇಂದ್ರದ ರೇವತಿಯವರಿಗೆ ಅತ್ಯುತ್ತಮ ಕಾರ್ಯಕರ್ತೆ ಪ್ರಶಸ್ತಿ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ‌ ಇಲಾಖೆ ಹಾಗೂ ಜಿಲ್ಲಾ ಸ್ತ್ರೀ ಶಕ್ತಿ‌ ಒಕ್ಕೂಟದ ವತಿಯಿಂದ ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ 2021-22ನೇ ಸಾಲಿನ ಯೋಜನಾ ಮಟ್ಟದ ಅತ್ಯುತ್ತಮ ಕಾರ್ಯಕರ್ತೆ ಪ್ರಶಸ್ತಿಯನ್ನು ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೇವತಿ ಎ.ರವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ರೇವತಿರವರ ಪರಿಚಯ: ಹಿರೇಬಂಡಾಡಿ ಗ್ರಾಮದ ಎಲಿಯ ನೇಮಣ್ಣ ಪೂಜಾರಿ ಹಾಗೂ ಗೋಪಿ ದಂಪತಿಯ ಪುತ್ರಿಯಾಗಿರುವ ರೇವತಿರವರು ಬೆಳ್ಳಿಪ್ಪಾಡಿ ಗ್ರಾಮದ ಕೋರ್ತಾಜೆ ಸೇಸು ಪೂಜಾರಿ ಹಾಗೂ ಚೆನ್ನಮ್ಮ ದಂಪತಿಯ ಪುತ್ರ ಶೇಖರ ಪೂಜಾರಿ ಕೋರ್ತಾಜೆಯವರ ಪತ್ನಿ. ಇವರ ಪ್ರಥಮ ಪುತ್ರಿ ಡಾ. ಲಿಖಿತಾರವರು ಬೆಂಗಳೂರಿನ ಸೈಂಟ್ ಜೋನ್ಸ್ ಹಾಸ್ಪಿಟಲ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ದ್ವಿತೀಯ ಪುತ್ರಿ ಅಂಕಿತಾರವರು ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಅಂತಿಮ‌ ವರ್ಷದ ಬಿ.ಎಸ್ಸಿ. ಫ್ಯಾಶನ್ ಡಿಸೈನಿಂಗ್ ಕೋರ್ಸ್‌ ವ್ಯಾಸಂಗ ಮಾಡುತ್ತಿದ್ದಾರೆ. ರೇವತಿರವರು ದಿನಾಂಕ 29-06-90ರಂದು ಹಿರೇಬಂಡಾಡಿ ಗ್ರಾಮದ ಅಡೆಕಲ್ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯಕ್ಕೆ ಹಾಜರಾಗಿ 9 ವರ್ಷ ಸೇವೆ ಸಲ್ಲಿಸಿದ್ದರು. ವಿವಾಹದ ನಂತರ ದಿನಾಂಕ 10.11.99ರಿಂದ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಅಂಗನವಾಡಿ ಕೇಂದ್ರದಲ್ಲಿ ಕಾರ‍್ಯ ನಿರ್ವಹಿಸುತ್ತಿದ್ದಾರೆ. 31 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಇವರ ಸೇವಾವಧಿಯಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳ ಶಾಲಾ ಪೂರ್ವ ಶಿಕ್ಷಣದ ಜೊತೆಗೆ ಇತರ ಇಲಾಖೆಯ ಕೆಲಸಗಳಾದ ಬೂತ್ ಮಟ್ಟದ ಅಧಿಕಾರಿಯಾಗಿ, ನವಸಾಕ್ಷರರಿಗೆ ಅಕ್ಷರಭ್ಯಾಸ, ವೃತ್ತಿ ಕೌಶಲ್ಯ ತರಬೇತಿಗಳಾದ ಫಿನಾಯಿಲ್ ತಯಾರಿಕೆ, ಅಣಬೆ ಕೃಷಿ, ಸಾಬೂನು ತಯಾರಿಸುವುದು, ಟೈಲರಿಂಗ್ ಮುಂತಾದ ಆದಾಯ ಉತ್ಪನ್ನ ಚಟುವಟಿಕೆ ನಡೆಸುವುದು,ರಾಷ್ಟ್ರೀಯ ಹಬ್ಬಗಳ ಆಚರಣೆ, ಬಾಲಮೇಳ ಕಾರ್ಯಕ್ರಮ ಆಯೋಜಿಸಿದ್ದಲ್ಲದೆ, ಗ್ರಾಮ ವಿಕಾಸ ಯೋಜನೆಯಲ್ಲಿ ಪ್ರೇರಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂಗನವಾಡಿ ಕೇಂದ್ರದ ಸ್ವಚ್ಛತೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಉದ್ಯೋಗ ಚೀಟಿ ಮಾಡಿಸಿ ಉದ್ಯೋಗ ಒದಗಿಸಿ ಕೊಡುವಲ್ಲಿ ಹಾಗೂ ಅಂಗನವಾಡಿ ಕೇಂದ್ರದ ಸುತ್ತ ಸುಮಾರು ೩೦ ಸಾವಿರ ರೂಪಾಯಿ ವೆಚ್ಚದಲ್ಲಿ ಮಹಿಳೆಯರಿಂದ ಸಮತಟ್ಟು ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 2016-17ನೇ ಸಾಲಿನಲ್ಲಿ ವಲಯ ಮಟ್ಟದ ಅತ್ಯುತ್ತಮ ಕಾರ್ಯಕರ್ತೆ ಪ್ರಶಸ್ತಿ, 2012-13ನೇ ಸಾಲಿನಲ್ಲಿ ವೃತ್ತಿ ಕೌಶಲ್ಯ ತರಬೇತಿ ಅಭಿನಂದನಾ ಪತ್ರ ಪುರಸ್ಕಾರ, 2020-21ರ ಸಾಲಿನಲ್ಲಿ ಕೋವಿಡ್ ನಿರ್ವಹಣೆಯ ಅತ್ಯುತ್ತಮ ಸೇವೆಗಾಗಿ ಗಣರಾಜ್ಯೋತ್ಸವ ದಿನದಂದು ಪುತ್ತೂರು ತಾಲೂಕು ಆಡಳಿತದಿಂದ ಸನ್ಮಾನ ಸ್ವೀಕರಿಸಿರುವ ರೇವತಿರವರ ಸಾಧನೆಗಳನ್ನು ಗುರುತಿಸಿ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

LEAVE A REPLY

Please enter your comment!
Please enter your name here