ಅನಾನುಕೂಲ ಮೆಟ್ಟಿ ನಿಂತು ಸುಖವಾದ ಜೀವನ ಮಾಡಲು ಕಾನೂನಿನ ಅರಿವು ಬೇಕೆ ಬೇಕು – ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿಯ ವಾರ್ಷಿಕ ಮಹಾಸಭೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನ್ಯಾಯಾಧೀಶ ರಮೇಶ್ ಎಮ್

0

 

ಪುತ್ತೂರು: ಮಹಿಳೆ ಸಮಾಜದಲ್ಲಿ ನಾಣ್ಯದ ಎರಡು ಮುಖ ಇದ್ದಂತೆ. ಮಹಿಳೆಯರ ಶೋಷಣೆ ತಲಾ ತಲಾಂತರದಿಂದ ನಡೆಯತ್ತಾ ಬಂದಿದೆ. ಇಂತಹ ಶೋಷಣೆಯನ್ನು ಮತ್ತು ಅನಾನುಕೂಲಾ ಮೆಟ್ಟಿ ನಿಂತು ಸುಖವಾದ ಜೀವನ ಮಾಡಲು ಕಾನೂನಿನ ಅರಿವು ಬೇಕೆ ಬೇಕು ಎಂದು ಪುತ್ತೂರು ನ್ಯಾಯಾಲಯದ ಪ್ರಧಾನ ವ್ಯವಹಾರಿಕ, ಮುಖ್ಯ ನ್ಯಾಯಿಕ ದಂಡಾಧಿಕಾರಿಯಾಗಿರುವ ತಾಲೂಕು ಕಾನೂನು ಸೇವೆ ಸಮಿತಿ ಅಧ್ಯಕ್ಷ ನ್ಯಾಯಾಧೀಶ ರಮೇಶ್ ಎಮ್ ಅವರು ಹೇಳಿದರು.

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಸಭಾಭವನದಲ್ಲಿ ಮಾ.10 ರಂದು ನಡೆದ ಪುತ್ತೂರು ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ 2019-2020, 2020-2021ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಂತಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಕಾನೂರು ಅರಿವು ನೆರವು ವಿಚಾರವಾಗಿ ಮಾತನಾಡಿದರು. ಹಿಂದಿನ ಕಾಲಕ್ಕಿಂತ ಪ್ರಸ್ತುತ ಮಹಿಳೆಯ ಮೇಲೆ ಶೋಷಣೆ ಹೆಚ್ಚಾಗಿದೆ ಎಂಬುದು ಸುಳ್ಳು. ಹಿಂದೆಯೂ ಮಹಿಳೆಯ ಮೇಲೆ ಶೋಷಣೆ ನಡೆಯುತ್ತಿತ್ತು. ಆಗ ಮಹಿಳೆ ಅದನ್ನು ವಿರೋಧಿಸುತ್ತಿರಲಿಲ್ಲ. ಇವತ್ತು ಮಹಿಳೆ ಶೋಷಣೆಯನ್ನು ಪ್ರಶ್ನಿಸುತ್ತಾಳೆ. ಹಾಗಾಗಿ ದೌರ್ಜನ್ಯ ಬೆಳಕಿಗೆ ಬರುತ್ತಿದೆ. ಹಿಂದೆಯೂ ಮಹಿಳೆಯ ಶೋಷಣೆ ನಿಯಂತ್ರಣಕ್ಕೆ ಹಿಂದಿನಿ‌ಂದಲೂ ಕಾನೂನು ಬಂದಿದೆ. ಈ ಎಲ್ಲಾ ಕಾನೂನು ಇದ್ದರೂ ಮಹಿಳೆಯನ್ನು ಪೂಜಿಸುವ ರೀತಿ ಹೇಗಿದೆ ಎಂಬುದನ್ನು ಅರಿಯಬೇಕು. ಗಾಂಧೀಜಿ ಹೇಳಿರುವಂತೆ ಯಾವಾಗ ಒಂಟಿ ಮಹಿಳೆ ನಿರ್ಬಯದಿಂದ ಹೋಗುತ್ತಾಳೋ ಆಗ ಸ್ವಾತಂತ್ರ್ಯ ಬರುತ್ತದೆ. ಆದರೆ ಅದು ಇನ್ನೂ ಆಗಿಲ್ಲ. ಈ ನಿಟ್ಟಿನಲ್ಲಿ ಸೂಕ್ಷ್ಮ ಕಾನೂನು ಬಂದರೂ ಮಹಿಳಾ ದೌರ್ಜನ್ಯ ನಿಂತಿಲ್ಲ. ಅದೇ ರೀತಿ ಇವತ್ತು ಕೌಂಟುಂಬಿಕ ದೌರ್ಜನ್ಯ ಕಾನೂನಿನಲ್ಲಿ ಮಹಿಳೆಗೆ ಉಪಯುಕ್ತವಾಗಿದೆ. ಆದರೆ ಇದನ್ನು ದುರುಪಯೋಗ ಮಾಡಬಾರದು ಎಂದ ಅವರು ಇವತ್ತು ಮಹಿಳಾ ಸಂಘಗಳು ಬಹಷ್ಟು ಪ್ರಾದಾನ್ಯತೆ ಪಡೆದಿದೆ. ಸಮಸ್ಯೆ ಬಂದಾಗ ಮಹಿಳಾ ಸಂಘಗಳ ಮಟ್ಟದಲ್ಲೇ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದು ಉತ್ತಮ ಎಂದರು. ಒಟ್ಟಿನಲ್ಲಿ ಅನಾನುಕೂಲಾ ಮೆಟ್ಟಿ ನಿಂತು ಸುಖವಾದ ಜೀವನ ಮಾಡಲು ಕಾನೂನಿನ ಅರಿವು ಬೇಕೆ ಬೇಕು ಎಂದರು.

ಬಾಲ್ಯವಿವಾಹ ಮುಕ್ತ‌ ಸಮಾಜಕ್ಕೆ ಪ್ರತಿಜ್ಞೆ ಸ್ವೀಕಾರ:
ಸಭೆಯಲ್ಲಿ ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿಯಿಂದ ಬಾಲ್ಯವಿವಾಹ ಮುಕ್ತ‌ ಸಮಾಜಕ್ಕೆ ಪ್ರತಿಜ್ಞೆ ಸ್ವೀಕಾರವನ್ನು ಮಾಡಲಾಯಿತು. ನೇತ್ರಾವತಿ ಗ್ರಾಮೀಣ ಸೊಸೈಟಿ ಮಾಜಿ ಅಧ್ಯಕ್ಷೆ ಜೊಹರಾ, ಸರೋಜಿನಿ, ನಗರಸಭೆ ಮಾಜಿ ಅಧ್ಯಕ್ಷೆ ವಾಣಿ ಶ್ರೀಧರ್, ರೇವತಿ, ನಗರಸಭೆ ಮಾಜಿ ಸದಸ್ಯೆ ಸ್ವರ್ಣಲತಾ, ಅಮಿತಾ ಹರೀಶ್ ಅತಿಥಿಗಳನ್ನು ಗೌರವಿಸಿದರು. ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಅರುಣ್ , ಸಹಾಯಕ ಸರಕಾರಿ ಅಭಿಯೋಜಕರಾದ ಕವಿತಾ, ಚೇತನಾ, ನ್ಯಾಯವಾದಿಗಳಾದ ಹರಿಣಾಕ್ಷಿ ಜೆ ಶೆಟ್ಟಿ, ರಾಜೇಶ್ವರಿ, ಅಶ್ವಿನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತ, ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಅಮಿತಾ ಹರೀಶ್, ಕಾರ್ಯದರ್ಶಿ ಮಮತಾ ಪಿ.ನಾಕ್, ಉಪಾಧ್ಯಕ್ಷೆ ಮಮತಾ ನಾರೋಳ್ತಪಲ್ಕೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here