ಪಂಚ ರಾಜ್ಯ ಚುನಾವಣಾ ಫಲಿತಾಂಶ – ಪುತ್ತೂರು ಬಿಜೆಪಿಯಿಂದ ವಿಜಯೋತ್ಸವ

0

  • ಮೋದಿ ನಾಯಕತ್ವವನ್ನು ದೇಶದ ಜನತೆ ಒಪ್ಪಿಕೊಂಡಿದೆ – ಕೆ.ಜೀವಂಧರ್ ಜೈನ್
  • ಮೋದಿ ನಾಯಕತ್ವವನ್ನು ಟೀಕಿಸುವ ಕಾಂಗ್ರೆಸ್ ಧೂಳೀಪಟ- ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು: ಉತ್ತರಪ್ರದೇಶ, ಉತ್ತರಖಾಂಡ್, ಗೊವಾ, ಮಣಿಪುರ ಹಾಗೂ ಪಂಜಾಬ್ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪಂಜಾಬ್ ಹೊರತು ಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ ಹಿನ್ನೆಲೆಯಲ್ಲಿ ಪುತ್ತೂರು ಬಿಜೆಪಿಯಿಂದ ತನ್ನ ಕಚೇರಿ ಬಳಿಯಲ್ಲಿ ಮಾ.10ರಂದು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದೆ.

ಮೋದಿ ನಾಯಕತ್ವವನ್ನು ದೇಶದ ಜನತೆ ಒಪ್ಪಿಕೊಂಡಿದೆ:
ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅವರು ಮಾತನಾಡಿ, ಈ ಚುನಾವಣಾ ಫಲಿತಾಂಶದ ಮೂಲಕ ಮೋದಿ ನಾಯಕತ್ವವನ್ನು ದೇಶದ ಜನತೆ ಒಪ್ಪಿದಂತ್ತಾಗಿದೆ. ಮೋದಿ ನಾಯಕತ್ವವನ್ನು ಟೀಕಿಸುವವರಿಗೆ ಈ ಫಲಿತಾಂಶದ ಮೂಲಕ ಉತ್ತರ ಸಿಕ್ಕಿದೆ. ಪ್ರಧಾನಿ ಮೋದಿಯವರ ಜನಪರ ಆಡಳಿತ, ಅಭಿವೃದ್ಧಿಯ ಚಿಂತನೆಯನ್ನು ಜನತೆ ತ್ರಿಕರಣಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ ಎಂದರು.

ಮೋದಿ ನಾಯಕತ್ವವನ್ನು ಟೀಕಿಸುವ ಕಾಂಗ್ರೆಸ್ ಧೂಳೀಪಟ:
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಪದೇ ಪದೇ ಮೋದಿ ನಾಯಕತ್ವವನ್ನು ಟೀಕಿಸುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಧೂಳೀಪಟವಾಗಿದೆ. ತನ್ನ ಆಡಳಿತವಿರುವ ಪಂಜಾಬ್ ರಾಜ್ಯವನ್ನೇ ಕಾಂಗ್ರೆಸ್‌ಗೆ ಉಳಿಸಿಕೊಳ್ಳಲು ಆಗಿಲ್ಲ. ಇನ್ನು ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಹಗಲು ಕನಸು ಕಾಣುತ್ತಿದ್ದಾರೆ. ಮುಂದಿನ ಬಾರಿಯೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮೂಲಕ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತದ ಕನಸನ್ನು ಸಾಕಾರಗೊಳಿಸಲಿದೆ ಎಂದರು. ವಿಜಯೋತ್ಸವದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಸುರೇಶ್ ಆಳ್ವ ಸಾಂತ್ಯ, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಉಪಾಧ್ಯಕ್ಷ ಮುಕುಂದ ಗೌಡ ಬಜತ್ತೂರು, ನಗರಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ಕಾರ್ಯದರ್ಶಿಗಳಾದ ಶಿವಕುಮಾರ್ ಪಿ.ಬಿ, ಗೋವರ್ದನ್, ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ, ನಗರಸಭಾ ಸದಸ್ಯರಾದ ದೀಕ್ಷಾ ಪೈ, ನವೀನ್ ಪೆರಿತ್ತೋಡಿ, ಹಿಂದೂ ಜಾಗರಣಾ ವೇದಿಕೆ ಪ್ರಮುಖರಾದ ಅಜಿತ್ ರೈ ಹೊಸಮನೆ, ಕೃಷ್ಣ ಪ್ರಸಾದ್, ಬಿಜೆಪಿ ಪ್ರಮುಖರಾದ ವಿಶ್ವನಾಥ ಕುಲಾಲ್, ಮಹೇಶ್ ಕೇರಿ, ಜಯಾನಂದ ಪಡ್ಡಾಯೂರು, ನರಿಮೊಗರು ಶಕ್ತಿಕೇಂದ್ರದ ಪ್ರಮುಖ್ ನವೀನ್ ರೈ ಶಿಬರ, ಆರ್ಯಾಪು ಶಕ್ತಿಕೇಂದ್ರದ ಪ್ರಮುಖ್ ಜಯಂತ ಶೆಟ್ಟಿ ಕಂಬಳದಡ್ಡ, ಪರ್ಪುಂಜ ಶಕ್ತಿಕೇಂದ್ರದ ಪ್ರಮುಖ್ ರಾಜೇಶ್ ರೈ ಪರ್ಪುಂಜ, ಕಚೇರಿ ಕಾರ್ಯದರ್ಶಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here