ಸದುಪಯೋಗವನ್ನು ಪಡೆದು ಕೊಂಡು ಸಬಲೀಕರಣದತ್ತ ಹೆಜ್ಜೆ ಇಡೋಣ – ಸ್ತ್ರೀಶಕ್ತಿ ಬ್ಲಾಕ್‌ಸೊಸೈಟಿ ಮಹಾಸಭೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಿಡಿಪಿಒ ಶ್ರೀಲತಾ

0

  • ಸಮಾಜಮುಖಿ ಸೇವಾರ್ಥಿಗಳಿಗೆ ಸನ್ಮಾನ – ಸಮಾಜಸೇವಾಶ್ರಮಕ್ಕೆ ಕೊಡುಗೆ – ಪದಾಧಿಕಾರಿಗಳ ಆಯ್ಕೆ
  • ಸುದ್ದಿ ಜನಾಂದೋಲನಕ್ಕೆ ಬೆಂಬಲ- ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ

ಪುತ್ತೂರು: ಮಹಿಳಾ ಸಬಲೀಕರಣದ ನೆಲೆಯಲ್ಲಿ ತಾವು ಮುಂದೆ ಬರಬೇಕಾದರೆ. ಯಾರೂ ಕೂಡಾ ತಮ್ಮನ್ನು ಕೈ ಹಿಡಿದು ಮುಂದೆ ನಡೆಸುವುದಿಲ್ಲ, ಆಗ ಇಲಾಖೆ, ಸರಕಾರ ದಾರಿ ತೋರಿಸಬಹುದು. ಮುಂದೆ ಹೋಗಿ ನಾವೆ ನಮ್ಮ ಕಾಲಮೇಲೆ ನಿಲ್ಲಬೇಕು. ಈ ನಿಟ್ಟಿನಲ್ಲಿ ಸುದುಪಯೋಗವನ್ನು ಪಡೆದು ಕೊಂಡು ಸಬಲೀಕರಣದತ್ತ ಹೆಜ್ಜೆ ಇಡೋಣ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ಹೇಳಿದರು.


ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಮಾ.10ರಂದು ನಡೆದ ಪುತ್ತೂರು ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ 2019-2020, 2020-2021೧ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅರಂಭದಲ್ಲಿ ಅವರು ಮಹಾಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆ ಮತ್ತು ಸಲಹೆಗಳಿಗೆ ಉತ್ತರಿಸಿದರು. ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಸದಸ್ಯತನದ ಸಂಖ್ಯೆ ಹೆಚ್ಚಿಸಬೇಕು. ಗುಂಪು ಚಟುವಟಿಕೆ ಮಾಡಿಕೊಳ್ಳಬೇಕು. ಆಗ ಸರಕಾರದಿಂದ ಸಿಗುವ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಈಗಾಗಲೇ ಅಮೃತಮಹೋತ್ಸವದ ಅಂಗವಾಗಿ ‘ಅಮೃತ ಬೀಜ ಧನ’ ಯೋಜನೆ ಸೌಲಭ್ಯ ಪಡೆಯಲು ಗುಂಪು ಚಟುವಟಿಕೆ ಅಗತ್ಯ ಎಂದರು. ಜಿಲ್ಲೆಯಲ್ಲೇ ಅತಿ ಹೆಚ್ಚು ಸದಸ್ಯತನ ಹೊಂದಿರುವ ಪುತ್ತೂರು ತಾಲೂಕಿನಲ್ಲಿ ತಾಲೂಕು ಮಟ್ಟದ ಸಮಾವೇಶ ಮಾಡಬಹುದು. ಯಾವುದೇ ಸಮಸ್ಯೆಗಳಿದ್ದರೆ 24/7 ಕೆಲಸ ನಿರ್ವಹಿಸುತ್ತಿರುವ ನಮ್ಮ ಇಲಾಖೆಯನ್ನು ಸಂಪರ್ಕಿಸಿ. ನಮ್ಮ ಜವಾಬ್ದಾರಿಯನ್ನು ನಾವು ಸರಿಯಾಗಿ ನಿಭಾಯಿಸುತ್ತೇವೆ. ನಮ್ಮಲ್ಲಿ ಜನಬಲವಿದೆ. ಧನ ಬಲವಿಲ್ಲ. ಈ ನಿಟಿನಲ್ಲಿ ಜನಬಲವನ್ನು ದುಪ್ಪಟ್ಟುಗೊಳಿಸೋಣ, ಇನ್ನು ಉತ್ತಮ ರೀತಿಯಲ್ಲಿ ಬ್ಲಾಕ್ ಸೊಸೈಟಿ ಹೆಮ್ಮರವಾಗಿ ಬೆಳೆಯುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಅಮಿತಾ ಹರೀಶ್ ಅವರು ಉತ್ತಮ ಸಹಕಾರ ನೀಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ ಹಲವು ಯೋಜನೆಗಳನ್ನು ಹಮ್ಮಿಕೊಂಡ ನಮ್ಮ ಅವಧಿಯಲ್ಲಿ ಸದಸ್ಯರು ಉತ್ತಮ ರೀತಿಯಲ್ಲಿ ಸ್ಪಂಧನೆ ನೀಡಿದ್ದಾರೆ. ಮುಂದಿನ ದಿನ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಬಹಳ ಶಕ್ತಿಯುತವಾಗಿ ಬೆಳೆಯಲಿ ಎಂದರು. ಸಂಘದ ಕಾರ್ಯದರ್ಶಿ ಮಮತಾ ಪಿ ನಾಕ್ ವರದಿ, ಖಜಾಂಚಿ ಲೆಕ್ಕಪತ್ರ ಮಂಡಿಸಿದರು. ನೇತ್ರಾವತಿ ನೇತ್ರಾವತಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷೆ ಜೊಹರಾ ನಿಸಾರ್, ಗೀತಾ ದಾಸರಮೂಲೆ, ಕೆ.ಟಿ.ವಲ್ಸಮ್ಮ ಸೇರಿದಂತೆ ಹಲವಾರು ಮಂದಿ ವಿವಿಧ ಸಲಹೆ ಸೂಚನೆ ನೀಡಿದರು.

ಸನ್ಮಾನ:
ಸಮಾಜಮುಖಿ ಸೇವೆ ಮಾಡುತ್ತಿರುವ ರೋಟರಿ ವಲಯ ಸೇನಾನಿ ಉಮೇಶ್ ನಾಯಕ್ ಮತ್ತು ಪೌಷ್ಟಿಕ ಪುತ್ತೂರು ಕಾರ್ಯಕ್ರಮದ ಮೂಲಕ ಸಮಾಜಮುಖಿ ಸೇವೆ ನೀಡಿದ ರೋಟರಿ ಎಲೈಟ್ ಕ್ಲಬ್ ಸರ್ವೀಸ್ ನಿರ್ದೇಶಕ ಮೌನೇಶ್ ವಿಶ್ವಕರ್ಮ, ಮಹಿಳಾ ಪ್ರಸೂತಿ ತಜ್ಞೆ ಕುಂತೂರು ಪದವಿನ ಕೇವಳಪಟ್ಟೆ ೯೪ ವರ್ಷ ಪ್ರಾಯದ ಅಂತಕೆ, ತಾಲೂಕಿನ ಉತ್ತಮ ಅಂಗನವಾಡಿ ಕಾರ್ಯಕರ್ತೆಯಾಗಿ ಆಯ್ಕೆಗೊಂಡ ಕೊಡಿಮರ ಅಂಗನವಾಡಿ ಕಾರ್ಯಕರ್ತೆ ರೇವತಿ, ಮಹಿಳಾ ಸಾಧಕಿಯರಾದ ಕಸವಿಲೇವಾರಿ ಘಟಕದ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಮಹಿಳಾ ಚಾಲಕರಾಗಿರುವ ನೆಲ್ಯಾಡಿಯ ಅನುಗ್ರಹ ಅಂಚನ್, ಕೌಕ್ರಾಡಿಯ ಸುನಿತಾ, ಸವಣೂರಿನ ಚಂದ್ರಾವತಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅವರನ್ನು ಸ್ತ್ರಿಶಕ್ತಿ ಬ್ಲಾಕ್ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು. ಸ್ತ್ರಿಶಕ್ತಿ ಬ್ಲಾಕ್ ಸೊಸೈಟಿಯ ಕಾರ್ಯದರ್ಶಿ ಮಮತಾ ಪಿ ನಾಯ್ಕ್ , ಉಪಾಧ್ಯಕ್ಷ ಮಮತಾ, ಸಹಾಯಕ ಶಿಶು ಅಭಿವೃದ್ದಿ ಭಾರತಿ, ಮೇಲ್ವಿಚಾರಕಿ ಸುಜಾತ ಅವರು ಸನ್ಮಾನ ಪತ್ರ ವಾಚಿಸಿದರು.

ಉತ್ತಮ ಗುಂಪಿಗೆ ಗೌರವ:
ಬನ್ನೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಬೀರಿಗ ಸ್ತ್ರೀಶಕ್ತಿ ಸಂಘ ವಿದ್ಯಾಶ್ರೀ ಗುಂಪು ಉತ್ತಮ ಗುಂಪು ಎಂಬುದಾಗಿ ಆಯ್ಕೆಯಾಗಿದ್ದು, ಗುಂಪಿನ ಸದಸ್ಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಸಮಾಜ ಸೇವಾ ಸಂಸ್ಥೆಗೆ ಕೊಡುಗೆ:
ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡುತ್ತಿರುವ ಇಚಿಲಂಪಾಡಿ ಆಶಾಭವನ್ ಚಾರಿಟೇಬಲ್ ಟ್ರಸ್ಟ್ ಮತ್ತು ಮರಿಯಲಾಮ್ಮ ಆಶ್ರಮಕ್ಕೆ ಸೋಲಾರ್ ವಾಟರ್ ಹೀಟರ್ ಅನ್ನು ಸ್ತ್ರಿಶಕ್ತಿ ಬ್ಲಾಕ್ ಸೊಸೈಟಿಯ ಮೂಲಕ ಕೊಡುಗೆಯಾಗಿ ನೀಡಲಾಯಿತು. ಸಂಸ್ಥೆಯ ಪದಾಧಿಕಾರಿಗಳು ಕೊಡುಗೆಯನ್ನು ಪಡೆದು ಕೊಂಡರು. ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ ಉಪಸ್ಥಿತರಿದ್ದರು.

ರಾಮಕೃಷ್ಣ ಸೇವಾ ಸಮಾಜಕ್ಕೆ ಕೊಡುಗೆ:
ಮಕ್ಕಳನ್ನು ದತ್ತು ಸ್ವೀಕಾರದ ಮೂಲಕ ಸಮಾಜ ಸೇವೆಗೆ ಮಾದರಿಯಾಗಿರುವ ರಾಮಕೃಷ್ಣ ಸೇವಾ ಸಮಾಜದ ಮಕ್ಕಳಿಗೆ ಆಟವಾಡಲು ರೂ.೫ಸಾವಿರ ಮೌಲ್ಯದ ಆಟಿಕೆಗಳನ್ನು ಸ್ತ್ರಿಶಕ್ತಿ ಬ್ಲಾಕ್ ಸೊಸೈಟಿಯ ಮೂಲಕ ನೀಡಲಾಯಿತು.

 

 

ಉದ್ಘಾಟನೆ:
ಕಾರ್ಯಕ್ರಮವನ್ನು ಪ್ರಧಾನ ವ್ಯವಹರಾರಿಕ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ, ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಮೇಶ್ ಎಮ್ ಉದ್ಘಾಟಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ, ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಅರುಣ್ ಕುಮಾರ್, ಸಹಾಯಕ ಸರಕಾರಿ ಅಭಿಯೋಹಕರಾದ ಕವಿತಾ ಮತ್ತು ಚೇತನ ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ, ಸ್ತ್ರಿಶಕ್ತಿ ಬ್ಲಾಕ್ ಸೊಸೈಟಿಯ ಖಜಾಂಚಿ ನಿವೇದಿತಾ, ಸದಸ್ಯರಾದ ಹೇಮಾ ವಿ, ರತ್ನ, ರೇವತಿ, ಶೋಬಾ ಕೆ, ಕುಸುಮ, ಸುಜಾತ ರೈ, ಸರೋಜಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ಉಮಾವತಿ, ಸರೋಜಿನಿ, ಹರಿಣಾಕ್ಷಿ, ನಾಗರತ್ನ, ಸುಜಾತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮೇಲ್ವಿಚಾರಕಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಕೊನೆಯಲ್ಲಿ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.


ಸುದ್ದಿ ಜನಾಂದೋಲನಕ್ಕೆ ಬೆಂಬಲ- ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ
ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಕಾರ್ಯಕ್ರಮದ ನಡುವೆ ಸುದ್ದಿ ಜನಾಂದಲೋನ ಮಾರ್ಗದರ್ಶನದಲ್ಲಿ ನಡೆಯುವ ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆಯನ್ನು ಮಾಡಲಾಯಿತು. ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೇಲ್ಚಿಚಾರಕಿ ಜಲಜಾಕ್ಷಿ ಘೋಷಣೆ ಕೂಗಿದರು. ವೇದಿಕೆಯಲ್ಲಿನ ಗಣ್ಯರು ಫಲಕ ಹಿಡಿದು ಘೋಷಣೆಗೆ ಧ್ವನಿಗೂಡಿಸಿದರು. ಸಭೆಯಲ್ಲಿದ್ದ ಸದಸ್ಯರು ಕೂಡಾ ಧ್ವನಿಗೂಡಿಸಿದರು.

LEAVE A REPLY

Please enter your comment!
Please enter your name here