ವಳತ್ತಡ್ಕ ಕೊರಗರ ಕಾಲೋನಿಯಲ್ಲಿ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಚಾಲನೆ

0

ಪುತ್ತೂರು; ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಮಾ. 12ರಂದು ಆರ್ಯಾಪು ಗ್ರಾಮದ ವಳತ್ತಡ್ಕ ಕೊರಗರ ಕಾಲೋನಿಯಲ್ಲಿ ಚಾಲನೆ ನೀಡಲಾಯಿತು.


ಕೊರಗರ ಕಾಲೋನಿಯ ಬೊಗ್ರ ಎಂಬವರ ಮನೆಯಲ್ಲಿ ಸಹಾಯಕ ಆಯುಕ್ತ ಗಿರೀಶ್ ನಂದರ ದಾಖಲೆ ವಿತರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಹಾಯಕ ಆಯುಕ್ತರು, ಕಂದಾಯ ಸಚಿವರ ನಿರ್ದೇಶನದಂತೆ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸುವ ಕಾರ್ಯಕ್ಕೆ ಸಾಂಕೇತಿಕ ಚಾಲನೆ ನೀಡಲಾಗಿದೆ. ಮುಂದೆ ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿ ಹಳ್ಳಿಗಳಿಗೂ ತೆರಲಿ ದಾಖಲೆಗಳನ್ನು ಮನೆ ಮನೆಗಳಿಗೆ ತಲುಪಿಸಲಾಗುವುದು. ಆರ್.ಟಿ.ಸಿ(ಪಹಣಿ ಪತ್ರ), ಜಾತಿ, ಆದಾಯ ಪ್ರಮಾಣಪತ್ರಗಳನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ ಎಂದರು.

   

ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ತಹಶಿಲ್ದಾರ್ ರಮೇಶ್ ಬಾಬು, ಕಂದಾಯ ನಿರೀಕ್ಷಕ ಕೆ.ಟಿ ಗೋಪಾಲ್, ಗ್ರಾಮಕರಣಿಕ ಮಹೇಶ್, ಆರ್ಯಾಪು ಗ್ರಾ.ಪಂ ಲೆಕ್ಕಸಹಾಯಕ ಮೋನಪ್ಪ, ಸಿಬಂದಿಗಳಾದ ಹೊನ್ನಪ್ಪ, ಹರೀಶ್, ಸ್ಥಳಿಯರಾದ ರಾಮ್ ಪ್ರಸಾದ್, ಜಗದೀಶ ಭಂಡಾರಿ, ನವೀನ್ ಶೆಟ್ಟಿ ಹಾಗೂ ಗುರುವ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here