ರೆಂಜಿಲಾಡಿ: ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ಜಾತ್ರೆಗೆ ಗೊನೆ ಮುಹೂರ್ತ

0

ನೂಜಿಬಾಳ್ತಿಲ: ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ನೇಮ ಮಾ.17ರಿಂದ 20ರ ವರೆಗೆ ಜರುಗಲಿದ್ದು ಆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಮಾ.10ರಂದು ನಡೆಯಿತು.

 

ನೂಜಿ ಗುತ್ತು ತೋಟದಲ್ಲಿ ಗೊನೆ ಕಡಿಯಲಾಯಿತು. ಅರ್ಚಕ ಕೃಷ್ಣ ಹೆಬ್ಬಾರ್ ಅವರು ಪೂಜೆ ನೆರವೇರಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಮೃತ್ಯುಂಜಯ ಬೀಡೆ ಕೆರೆತೋಟ, ಉತ್ಸವ ಸಮಿತಿ ಅಧ್ಯಕ್ಷ ದುಗ್ಗಣ್ಣ ಗೌಡ ಹೊಸಮನೆ, ಆಡಳಿತ ಸಮಿತಿ ಕರ‍್ಯದರ್ಶಿ ಉಮೇಶ್ ಶೆಟ್ಟಿ ಸಾಯಿರಾಂ, ಜತೆಕರ‍್ಯದರ್ಶಿ ರವಿಪ್ರಸಾದ್ ಕರಿಂಬಿಲ, ಸದಸ್ಯರಾದ ನೇಮಣ್ಣ ಗೌಡ ಕಲ್ನಾರ್, ಸೋಮಶೇಖರ ನಡುಗುಡ್ಡೆ, ಉಮೇಶ್ ಅರ್ತಿತ್ತಡಿ, ಜಯಂತ್ ಬರೆಮೇಲು, ಯಶೋಧ ಸಂಕೇಶ, ಉತ್ಸವ ಸಮಿತಿ ಕರ‍್ಯದರ್ಶಿ ಉಮೇಶ್ ಸಾಕೋಟೆಜಾಲು, ಕೋಶಾಧಿಕಾರಿ ಪದ್ಮನಾಭ ಗೌಡ ಕೇಪುಂಜ, ಗೌರವ ಸಲಹೆಗಾರರಾದ ಭಾಸ್ಕರ ಗೌಡ ಎಲುವಾಳೆ, ಕೊರಗಪ್ಪ ಗೌಡ ಪಾಲೆತ್ತಡಿ, ರಾಮಚಂದ್ರ ಗೌಡ ಎಲುವಾಳೆ, ಪರಿಚಾರಕ ವರ್ಗದವರಾದ ವಿಜಯಕುಮಾರ್ ಕೇಪುಂಜ, ಯಶೋಧರ ಗೌಡ ಮಾರಪ್ಪೆ, ಡೀಕಯ್ಯ ಗೌಡ ಪಾಲೆತ್ತಡಿ, ಸೀತಾರಾಮ ಗೌಡ ತಲೆಕ್ಕಿ, ತಿಮ್ಮಪ್ಪ ಗೌಡಸಾಕೋಟೆಜಾಲು, ಲಿಂಗಪ್ಪ ಗೌಡ ಬಾಂತಾಜೆ, ಧರ್ಣಪ್ಪ ಗೌಡ ಪಿಲಿತ್ತಡಿ, ಚೆನ್ನಪ್ಪ ಗೌಡ ಬರೆಮೇಲು, ಡೀಕಯ್ಯ ಗೌಡ ಪಾಡ್ಲ, ಪುರುಷೋತ್ತಮ ಗೌಡ ಗರ್ಗಾಸ್‌ಪಾಲ್, ಸೇರಿದಂತೆ ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here