ಯಕ್ಷಗಾನವೆಂಬುವುದು ಭಾರತೀಯ ಸಂಸ್ಕೃತಿಯನ್ನು ಅತೀ ಎತ್ತರಕ್ಕೆ ಕೊಂಡೊಯ್ದ ಕರಾವಳಿಯ ಹೆಮ್ಮೆಯ ಕಲೆ : ಡಾ| ರೇಣುಕಾ ಪ್ರಸಾದ್ ಕೆ.ವಿ.

0

 

 

ಯಕ್ಷಗಾನವೆಂಬುವುದು ಭಾರತೀಯ ಸಂಸ್ಕೃತಿಯನ್ನು ಅತೀ ಎತ್ತರಕ್ಕೆ ಕೊಂಡೊಯ್ದ ಕರಾವಳಿಯ ಹೆಮ್ಮೆಯ ಕಲೆ, ಇದು ಎಲ್ಲಾ ಕಲೆಗಳಿಂದಲೂ ಮಿಳಿತಗೊಂಡಿರುವ ನಮ್ಮೂರಿನ ಆರಾಧನೆಯ ಕಲೆ. ಇದರಲ್ಲಿ ಸಂಗೀತವಿದೆ. ನೃತ್ಯವಿದೆ. ಸಂಭಾಷಣೆಯಿದೆ, ವೇಷಭೂಷಣವಿದೆ. ಭಾವಾಭಿನಯವಿದೆ. ಇದರಿಂದಾಗಿ ಯಕ್ಷಗಾನಕ್ಕೆ ಮಾರುಹೋಗದವರೇ ಇಲ್ಲ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ), ಇದರ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ| ರೇಣುಕಾ ಪ್ರಸಾದ್ ಕೆ.ವಿ. ಯವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಅವರು 23-10-2022ರಂದು ಫ್ರೆಂಡ್ಸ್ ಕ್ಲಬ್ ಪೈಲಾರು (ರಿ) ಮತ್ತು ಶೌರ್ಯ ಯುವತಿ ಮಂಡಲ (ರಿ) ಪೈಲಾರು ಇವುಗಳ ಸಹಯೋಗದೊಂದಿಗೆ ನಡೆದ ಪೈಲಾರು ‘ಯಕ್ಷೇತ್ಸವ 2022ರ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಶ್ರೀ ಯುವರಾಜ ಜೈನ್, ಬಲ್ನಾಡು ಪೇಟೆ, ಮರ್ಕಂಜ ಇವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಲಿಂಗ ಭೇದವಿಲ್ಲದೆ, ಜಾತಿ, ಧರ್ಮ ಭೇದವಿಲ್ಲದೆ ಯಕ್ಷಗಾನವನ್ನು ಆಸ್ವಾದಿಸುತ್ತಿದ್ದಾರೆ. ನಮ್ಮ ಈ ಯಕ್ಷಗಾನ ಕಲೆಯು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಇದರ ಬೇಡಿಕೆ ಇದೆ. ಇಂತಹ ಕರಾವಳಿಯ ಗಂಡು ಕಲೆಯನ್ನು ಈಗಿನ ಕಾಲದಲ್ಲಿ ಹೆಣ್ಣುಮಕ್ಕಳು ಸಹ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಈ ಕಲೆಯನ್ನು ಪೈಲಾರು ಯಕೋತ್ಸವ ಎಂಬ ನಾಮಾಂಕಿತದಡಿಯಲ್ಲಿ ಈ ಊರಿನ ಜನತೆಗೆ ಆಸ್ವಾದಿಸಲು ಅವಕಾಶ ಮಾಡಿಕೊಟ್ಟ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು. ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ರಜತ, ಸುವರ್ಣ ಮಹೋತ್ಸವವನ್ನು ಆಚರಿಸಲಿ ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಮೋಹನ್‌ರಾಂ ಸುಳ್ಯ ವಹಿಸಿದ್ದರು. ಜನಪದ ಸಂಶೋಧಕರಾದ ಡಾ| ಸುಂದರ ಕೇನಾಜೆ ಅಭಿನಂದನಾ ಭಾಷಣ ಮಾಡಿದರು. ನಿವೃತ್ತ ಖಜಾನಾಧಿಕಾರಿಯಾದ ಶ್ರೀ ಸಂಜೀವ ಗೌಡ, ಫ್ರೆಂಡ್ಸ್ ಕ್ಲಬ್‌ ಪೈಲಾರು ಜೈದೀಪ್‌ ಕಡಪಳ, ಶೌರ್ಯ ಯುವತಿ ಮಂಡಲದ ಅಧ್ಯಕ್ಷೆ ಚರಿಷ್ಮಾ ಮತ್ತು ಸಂಘಟನೆಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here