ಮರ್ಕಂಜ ಪಂಚಾಯತ್ ನಲ್ಲಿ ಕೋಟಿಕಂಠ ಗೀತಾ ಗಾಯನ ಕಾರ್ಯಕ್ರಮ

0

 

 

67 ನೇ ವರ್ಷದ
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡಿನಾದ್ಯಂತ ಆಯೋಜಿಸಲಾದ ಕೋಟಿಕಂಠ ಗೀತಗಾಯನ ಕಾರ್ಯಕ್ರಮವನ್ನು ಮರ್ಕಂಜ ಪಂಚಾಯತ್ ನಲ್ಲಿ ಅ. 28 ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಪವಿತ್ರ ಗುಂಡಿ, ಉಪಾಧ್ಯಕ್ಷ ಗೋವಿಂದ ಅಳವುಪಾರೆ ಹಾಗೂ ಸದಸ್ಯರು, ಪಿ.ಡಿ.ಒ ರವಿಚಂದ್ರ ಮತ್ತು ಸಿಬ್ಬಂದಿ ವರ್ಗದವರು, ಗ್ರಂಥಾಲಯ ಮೇಲ್ವಿಚಾರಕರು, ಪಾಲ್ಗೊಂಡಿದ್ದರು. ಕರುನಾಡಿನ ಗೀತೆಗಳನ್ನು ಸಮೂಹವಾಗಿ ಹಾಡಿ ಕನ್ನಡ ನಾಡಿನ ವೈಶಿಷ್ಟ್ಯತೆಯನ್ನು ಬಿಂಬಿಸಿದರು .
ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಾಗಿ ಎಲ್ಲರೂ ಸಂಕಲ್ಪ ವಿಧಿ ಕೈಗೊಂಡರು.

LEAVE A REPLY

Please enter your comment!
Please enter your name here