ಸವೇರಪುರ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

0

 

 

 

ಸಂಪಾಜೆಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.1ರಂದು ಶಾಲಾ ಸಂಚಾಲಕ ರಾದ ವ. ಫಾ.ಪಾವ್ಲ್ ಕ್ರಾಸ್ತ ಇವರ ಅಧ್ಯಕ್ಷತೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಗ್ರೀಷ್ಮ ಎನ್.ಎಂ ನಿರೂಪಣೆ ಮಾಡಿದರು .ವಿದ್ಯಾರ್ಥಿನಿ ತನ್ವಿ ಎನ್.ಪಿ ಸ್ವಾಗತಿಸಿದರು. ವಿದ್ಯಾರ್ಥಿನಿ ಆಯಿಷತ್ ಶಿಮ್ರಾರವರು ಕನ್ನಡ ನಾಡಿನ ಉಗಮ,ಕರ್ನಾಟಕದ ಏಕೀಕರಣ ಹಾಗೂ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಮ್ಮ ಭಾಷಣದಲ್ಲಿ ತಿಳಿಸಿದರು.
ಶಾಲಾ ಸಂಚಾಲಕರು ಪ್ರೌಢ ಶಾಲಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿ ದರು.
ಪರಿಣಿತ ಹೆಚ್.ಆರ್ ಧನ್ಯವಾದಗೈದರು.

LEAVE A REPLY

Please enter your comment!
Please enter your name here