ಪಾಲ್ತಾಡು ವಿಷ್ಣುನಗರದಲ್ಲಿ ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಸವಣೂರು : ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುನಗರದಲ್ಲಿ ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.24ರಿಂದ ಮಾ.25ರವರೆಗೆ ನಡೆಯಿತು. 
ಮಾ.24ರಂದು ಬೆಳಿಗ್ಗೆ ಗಣಹೋಮ, ಶುದ್ದಿಕಲಶ, ಸಂಜೆ ಪಾಲ್ತಾಡು ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆದು, ರಾತ್ರಿ ಮೇಲೇರಿಗೆ ಅಗ್ನಿಸರ್ಶ ನಡೆಯಿತು,ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಕುಳಿಚ್ಚಾಟು ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಕಾರಿಂಜ ಕಾಂಜವೆ ತುಳು ಯಕ್ಷಗಾನ ಬಯಲಾಟ ನಡೆಯಿತು. ಮಾ.25ರಂದು ಪ್ರಾತಃಕಾಲ ಶ್ರೀವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಬೆಳಿಗ್ಗೆ ಪ್ರಸಾದ ವಿತರಣೆ ನಡೆದು ಸಂಜೆ ಗುಳಿಗನ ಕೋಲ ನಡೆಯಿತು. 
ಈ ಸಂಧರ್ಭ ದೈವಸ್ಥಾನದ ಆಡಳಿತ ಮೊಕ್ತೇಸರ ಎನ್, ನವೀನ್ ರೈ ನಡುಮನೆ, ಸಮಿತಿಯ ಪಿ. ನಾರಾಯಣ ರೈ ಪಾಲ್ತಾಡು, ವಿಲಾಸ್ ರೈ ಪಾಲ್ತಾಡು, ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು,ವಿನೋದ್ ರೈ ಪಾಲ್ತಾಡು, ಶೀಲಾವತಿ ರೈ ನಡುಮನೆ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here