ವಿಟ್ಲ: ಮನೆಕಳವು ಪ್ರಕರಣ – ಓರ್ವನ ಸೆರೆ

0

ವಿಟ್ಲ: ಮನೆಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಮಾ.27ರಂದು ಬಂಧಿಸಿದ್ದಾರೆ. ರಾಧುಕಟ್ಟೆ ನಿವಾಸಿ ಬಶೀರ್ ಯಾನೇ ಅಬ್ದುಲ್ ಬಶೀರ್ ಬಂಧಿತ ಆರೋಪಿ

ವಿಟ್ಲಪಡ್ನೂರು ಗ್ರಾಮದ ಕಡಂಬು ಎಂಬಲ್ಲಿರುವ ಹೈದರಾಲಿ ಎಂಬವರ ಮನೆಯಲ್ಲಿ ಮಾ.೧೩ರಂದು ರಾತ್ರಿ. ಬೆಡ್‌ರೂಂನಲ್ಲಿರುವ ಎರಡು ಕಪಾಟುಗಳಿದ್ದ 2.5 ಗ್ರಾಂನ ಒಂದು ಚಿನ್ನದ ಉಂಗುರ ಹಾಗೂ 4 ಗ್ರಾಂ ನ ಒಂದು ಕಿವಿಯ ಓಲೆ ಕಳವುಗೈದಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಯನ್ನು ರಾಧುಕಟ್ಟೆ ಎಂಬಲ್ಲಿ ವಶಕ್ಕೆ ಪಡೆದುಕೊಂಡು ಆತ ಕಳ್ಳತನ ಮಾಡಿದ್ದ ಚಿನ್ನದ ಕಿವಿಯೋಲೆ ಮತ್ತು ಚಿನ್ನದ ಉಂಗುರ ಹಾಗೂ ಆರೋಪಿ ಕೃತ್ಯಕ್ಕೆ ಬಳಸಲಾದ ಮೋಟಾರ್ ಸೈಕಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಬಶೀರ್ ಅಲಿಯಾಸ್ ಅಬ್ದುಲ್ ಬಶೀರ್ ಅಲಿಯಾಸ್ ರಾಧುಕಟ್ಟೆ ಬಶೀರ್ ವಿಟ್ಲ ಠಾಣಾ ವ್ಯಾಪ್ತಿಯ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾರೆ. ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ಚಿನ್ನದಂಗಡಿಯ ಗೋಡೆ ಕೊರೆದು ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಽತನಾಗಿ ಇತ್ತೀಚೆಗಷ್ಟೆ ಜೈಲಿನಿಂದ ಹೊರಬಂದಿದ್ದ. ಈತ ಇದೀಗ ಮತ್ತೆ ಪೊಲೀಸರ ವಶವಾಗಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ ಮತ್ತು ಅಡಿಷನಲ್ ಎಸ್‌ಪಿ ಕುಮಾರಚಂದ್ರರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಪ್ರತಾಪ ಸಿಂಗ್ ಥರಟ್‌ರವರ ನೇತೃತ್ವದಲ್ಲಿ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್‌ರವರ ಸಾರಥ್ಯದಲ್ಲಿ, ಎಸ್‌ಐಗಳಾದ ಸಂದೀಪಕುಮಾರ್ ಶೆಟ್ಟಿ, ಸಂಜೀವ ಪುರುಷ, ಸಿಬ್ಬಂದಿಗಳಾದ ಜಯರಾಮ , ಪ್ರಸನ್ನ, ಹೇಮರಾಜ, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here