ಬಿಜೆಪಿ ಸರಕಾರದ ಅರಾಜಕತೆ ಆರೋಪ – ಎಸ್‌ಡಿಪಿಐಯಿಂದ ಪ್ರತಿಭಟನೆ

0

ಪುತ್ತೂರು: ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತದಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅರಾಜಕತೆಯು ಸೃಷ್ಟಿಯಾಗಿದೆ. ಸಂಘಪರಿವಾರ ಪ್ರೇರಿತ ಶಕ್ತಿಗಳು ರಾಜ್ಯದಲ್ಲಿ ದ್ವೇಷವನ್ನು ಹರಡಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಾದ್ಯಂತ ಎಸ್‌ಡಿಪಿಐ ವತಿಯಿಂದ ಎ.1 ರಂದು ಪ್ರತಿಭಟನೆ ನಡೆದಿದ್ದು, ಪುತ್ತೂರಿನಲ್ಲಿ ಎಸ್‌ಡಿಪಿಐ ಪಕ್ಷದಿಂದ ದರ್ಬೆ ವೃತ್ತದಿಂದ ಸಹಾಯಕ ಕಮೀಷನರ್ ಕಚೇರಿ ತನಕ ಕಾಲ್ನಡಿಗೆ ಜಾಥ ನಡೆಸಿ ಬಳಿಕ ಪುತ್ತೂರು ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು.

ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಪುತ್ತೂರು ವಿಧಾನ ಸಮಿತಿ ಎಸ್ ಡಿ ಪಿಐ ಅಧ್ಯಕ್ಷ ಇಬ್ರಾಹಿಂ ಸಾಗರ್, ಸುಳ್ಯದ ಅಧ್ಯಕ್ಷ ಇಕ್ಬಲ್ ಬೆಳ್ಳಾರೆ, ಬೆಳ್ತಂಗಡಿ ಅಧ್ಯಕ್ಷ ನಿಸಾರ್ ಕುದ್ರಡ್ಕ, ಕಡಬ ಬ್ಲಾಕ್ ಅಧ್ಯಜ್ಷ ಬಶೀರ್ ಆತೂರು ಪ್ರತಿಭಟನೆಯಲ್ಲಿ ಭಾಷಣ ಮಾಡಿದರು.

ಹಮೀದ್ ಸಾಲ್ಮರ ಸ್ವಾಗತಿಸಿದರು. ಎಮ್ ಎ ರಫೀಕ್ ಕಾರ್ಯಕ್ರಮ ನಿರೂಪಿಸಿದರು ತಾಲೂಕು ಕಾರ್ಯದರ್ಶಿ ರಹಿಮ್ ವಂದಿಸಿದರು . ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ವಿವಿಧ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here