ಶಿಸ್ತು, ಮೌಲ್ಯ, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ ಫಿಲೋಮಿನಾ ಪಿಯು ಕಾಲೇಜು ತಾಲೂಕಿನ ಹಿರಿಯ ಸಂಸ್ಥೆ ಎಂಬ ಹೆಗ್ಗಳಿಕೆ | ಪ್ರತಿಭೆಗಳ ಕೇಂದ್ರವಾಗಿರುವ ಸಂಸ್ಥೆ

0

ಪುತ್ತೂರು: ಮಂಗಳೂರು ಧರ್ಮಪ್ರಾಂತ್ಯದ ಕಥೋಲಿಕ್ ಶಿಕ್ಷಣ ಮಂಡಳಿಯ ಅಧೀನದಲ್ಲಿರುವ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ೧೯೫೮ರಲ್ಲಿ ಶಿಕ್ಷಣದ ಹರಿಕಾರ, ಶಿಕ್ಷಣ ಶಿಲ್ಫಿ ವಂ|ಮೊ|ಆಂಟನಿ ಪತ್ರಾವೋರವರಿಂದ ದರ್ಬೆ ಫಿಲೋನಗರದಲ್ಲಿ ಸ್ಥಾಪಿಸಲ್ಪಟ್ಟಿತ್ತು. 64 ವರ್ಷಗಳ ಆಚರಣೆಯ ಸಂಭ್ರಮದಲ್ಲಿರುವ ಈ ಕಾಲೇಜ್ ೨೦೦೧ರಲ್ಲಿ ಪದವಿ ಪೂರ್ವ ಶಿಕ್ಷಣವು ಸರಕಾರದ ಅಧಿನಿಯಮದಂತೆ ವಿಂಗಡಣೆಯಾಗಿ ಸಂತ ಫಿಲೋಮಿನಾ ಪದವಿ ಪೂರ್ವಕಾಲೇಜುಎಂದು ನಾಮಾಂಕಿತಗೊಂಡಿತ್ತು. ರಾಜ್ಯ ಸರಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ‘ಎ’ ಶ್ರೇಣಿಯ ಮಾನ್ಯತೆ ಪಡೆದ ಈ ಶಿಕ್ಷಣ ಸಂಸ್ಥೆಯು ಪುತ್ತೂರು ಮಾಯಿದೆ ದೇವುಸ್‌ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಪ್ರಸ್ತುತ ಸಂಚಾಲಕರಾಗಿ, ವಂ|ವಿಜಯ್ ಲೋಬೋರವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ:
ಆರಂದಿಂದ ಇಲ್ಲಿವರೆಗೆ ಫಿಲೋಮಿನಾ ಪದವಿ ಪೂರ್ವ ಕಾಲೇಜು ಮಾಹಿತಿ, ಶಿಸ್ತು, ಮೌಲ್ಯಗಳು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ನಂಬಿಕೆ ಮತ್ತು ಸೇವೆ ಎಂಬ ಧ್ಯೇಯವಾಕ್ಯದಡಿಯಲ್ಲಿ ಈ ವಿದ್ಯಾದೇಗುಲವು ಜಾತಿ, ಮತ, ಧರ್ಮ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನವಾದ ವಿದ್ಯಾಭ್ಯಾಸದ ಅವಕಾಶವನ್ನು ಕಲ್ಪಿಸಿದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಚಾರದಲ್ಲಿ ಈ ಸಂಸ್ಥೆಯು ಆಶಾಕಿರಣವಾಗಿದೆ ಎಂಬುದಂತೂ ಸತ್ಯವಾದ ವಿಚಾರವಾಗಿದೆ. ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡೆ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಇನ್ನಿತರ ವಿಷಯಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಈ ಸಂಸ್ಥೆಯದ್ದಾಗಿದೆ.

ಉತ್ತಮ ಫಲಿತಾಂಶ:
ಸ್ಥಾಪನೆಯ ಹಂತದಿಂದಲೂ ಸತತವಾಗಿ ಉತ್ತಮ ಫಲಿತಾಂಶದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಹೆಮ್ಮೆಯ ಫಲಿತಾಂಶವನ್ನು ದಾಖಲಿಸುತ್ತಿದೆ. ಸಂಸ್ಥೆ ಸ್ಥಾಪನೆಯಾದಗಿನಿಂದ ಇಂದಿನವರೆಗೆ ಅನೇಕ ಪ್ರತಿಭಾನ್ವಿತ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸಿದೆ. ಅನೇಕ ಪ್ರತಿಭಾನ್ವಿತರು ಕಲಿಕಾ ಕ್ಷೇತ್ರದಲ್ಲಿ ಅಥವಾ ಕ್ರೀಡಾಕ್ಷೇತ್ರದಲ್ಲಿ ತನ್ನ ಪ್ರತಿಭೆಯ ಛಾಪನ್ನು ಮೂಡಿಸುತ್ತಾ ಬಂದಿದ್ದಾರೆ ವಿದ್ಯಾರ್ಥಿಗಳ ಜ್ಞಾನ ವಿಕಸನಗೋಸ್ಕರ ಕಾಲೇಜ್‌ನಲ್ಲಿ ಹಲವು ಸಂಘಗಳನ್ನು ಹುಟ್ಟುಹಾಕಲಾಗಿದೆ. ಹಿಂದಿ ಸಭಾ, ಕಂಪ್ಯೂಟರ್‌ಕ್ಲಬ್, ಸಂಸ್ಕೃತಿ ಸಂಘ, ಸಾಹಿತ್ಯ ಸಂಘ, ವಿಮೆನ್ ಎಂಪವರ್‌ಮೆಂಟ್ ಅಸೋಸಿಯೇಶನ್, ವಿದ್ಯಾರ್ಥಿ ಕೌನ್ಸಿಲ್, ಕಲಾ ಸಂಘ, ಕನ್ನಡ ಸಂಘ, ಹ್ಯೂಮನ್ ಅಸೋಸಿಯೇಶನ್, ಕಾಮರ್ಸ್ ಅಸೋಸಿಯೇಶನ್, ದಿವ್ಯಚೇತನಾ ಅಸೋಸಿಯೇಶನ್, ಇಕೋ ಕ್ಲಬ್, ಶಿಕ್ಷಕ-ರಕ್ಷಕ ಸಂಘ, ವಿಜ್ಞಾನ ಸಂಘ, ಕ್ರೀಡಾ ಸಂಘದೊಂದಿಗೆ ಅನೇಕ ಸಂಘಗಳನ್ನು ಒಳಗೊಂಡಿದೆ.

ಸಿ.ಇ.ಟಿ/ಸಿ.ಪಿ.ಟಿ/ಜೆಇಇ/ನೀಟ್‌ತರಬೇತಿ:
ಗ್ರಾಮೀಣ ಐಟಿ ಕ್ವಿಜ್, ಕಬಡ್ಡಿ, ಹಾಕಿ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಚಾಂಪಿಯನ್ಸ್, ರಾಷ್ಟ್ರಮಟ್ಟದಲ್ಲಿ ಬಹುಮಾನಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪೂರಕ ಬೋಧನೆ ಮಾತ್ರವಲ್ಲದೆ ಹಲವಾರು ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ದ್ವಿತೀಯ ವಿಜ್ಞಾನ ವಿದ್ಯಾರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ.ಇ.ಟಿ), ಜೆಇಇ ಹಾಗೂ ನೀಟ್ ಪರೀಕ್ಷೆಯ ತರಬೇತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ತರಬೇತಿ, ಸಿ.ಎ ಪರೀಕ್ಷೆಗೆ ಸಹಕಾರಿಯಾಗಲು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಪಿ.ಟಿ ತರಬೇತಿ, ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಕಾಲೇಜ್‌ನಲ್ಲಿಯೇ ನುರಿತ ಅಧ್ಯಾಪಕರಿಂದ ತರಬೇತಿ, ಬೇಸಿಗೆ ರಜೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಜ್ಞಾನ ಹೆಚ್ಚಿಸಲು ಇನ್ನೂ ಹೆಚ್ಚಿನ ಪಠ್ಯಪುಸ್ತಕದ ತರಬೇತಿ ಕೂಡ ಆಯೋಜಿಸಲಾಗಿದೆ.

ತಾಲೂಕಿನ ಹಿರಿಯ ಸಂಸ್ಥೆ ಎಂಬ ಹೆಗ್ಗಳಿಕೆ:
ತಾಲೂಕಿನ ಹಿರಿಯ ಸಂಸ್ಥೆಯೆನಿಸಿದ ಈ ಶಿಕ್ಷಣ ಕೇಂದ್ರ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾರ್ಥಿ ನಿಲಯದ ಸೌಲಭ್ಯವನ್ನು ಒದಗಿಸುವುದರೊಂದಿಗೆ ಸೌಹಾರ್ದಯುತವಾದ ವಾತಾವರಣವನ್ನು ನಿರ್ಮಾಣ ಮಾಡಿದೆ. ಅನುಭವಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಪ್ರಸ್ತುತ ವರ್ಷ ಸುಮಾರು 1300ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯುತ್ತಿದ್ದಾರೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶ್ರಮ ವಹಿಸುವ ಈ ಸಂಸ್ಥೆಯಲ್ಲಿ ವಿಶಾಲವಾದಕಂಪ್ಯೂಟರ್ ಕೇಂದ್ರ, ಗ್ರಂಥಾಲಯ, ಪ್ರಯೋಗ ಶಾಲೆಗಳು, ಹುಡುಗಿಯರಿಗೆ ಪ್ರತ್ಯೇಕ ವಿಶ್ರಾಂತಿಕೊಠಡಿ, 4೦೦ ಮೀ. ಟ್ರ್ಯಾಕ್‌ವುಳ್ಳ ವಿಶಾಲವಾದ ಮೈದಾನ, ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್‌ಗಳನ್ನು ಸಂಸ್ಥೆಯು ಒಳಗೊಂಡಿದೆ.

ವಿಭಾಗಗಳು:
-ವಿಭಾಗ ೧(ಭಾಷೆಗಳು): ಇಂಗ್ಲೀಷ್, ಕನ್ನಡ, ಹಿಂದಿ, ಸಂಸ್ಕೃತ
-ಕಲಾ ವಿಭಾಗ(ಎಚ್.ಇ.ಎಸ್.ಪಿ): ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ ಮತ್ತು ಸಮಾಜ ಶಾಸ್ತ್ರ
-ವಾಣಿಜ್ಯ ವಿಭಾಗ(ಎಸ್.ಇ.ಬಿ.ಎ/ಎಸ್.ಸಿ.ಬಿ.ಎ/ಇ.ಸಿ.ಬಿ.ಎ): ಲೆಕ್ಕಶಾಸ್ತ್ರ, ಆರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ವ್ಯವಹಾರ ಆಧ್ಯಯನ, ಗಣಕ ಶಾಸ್ತ್ರ
-ವಿಜ್ಞಾನ ವಿಭಾಗ(ಪಿ.ಸಿ.ಎಂ.ಬಿ/ಪಿ.ಸಿ.ಎಂ.ಸಿ/ಪಿ.ಸಿ.ಎಂ.ಎಸ್/ಪಿ.ಸಿ.ಎಂ.ಇ): ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಗಣಕ ಶಾಸ್ತ್ರ, ಎಲೆಕ್ಟ್ರಾನಿಕ್ಸ್, ಸಂಖ್ಯಾಶಾಸ್ತ್ರ

ಶಿಕ್ಷಣ ಶಿಲ್ಪಿ ಎಂದೇ ಖ್ಯಾತರಾದ ಮೊ|ಪತ್ರಾವೋರವರಿಂದ ಸ್ಥಾಪಿತವಾದ ಫಿಲೋಮಿನಾ ಪಿಯು ಕಾಲೇಜು ಎಂಬ ಈ ವಿದ್ಯಾಸಂಸ್ಥೆಯು ಸುದೀರ್ಘಇತಿಹಾಸವಿರುವ ಸಂಸ್ಥೆ. ಕೊರೋನಾ ಕಾಲಘಟ್ಟದಲ್ಲಿ ಸರಕಾರದ ನಿರ್ದೇಶನದಂತೆ ಅಧ್ಯಾಪಕರು ಅತ್ತ್ಯುತ್ಸಾಹದಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಿರಂತರವಾಗಿ ಹಮ್ಮಿಕೊಂಡು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಡಲಾಗಿತ್ತು. ಶಾಲಾ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಛೇರಿ ವೆಬ್‌ಸೈಟ್: www.sppucputtur.org ಅಥವಾ ಕಾಲೇಜು ಪ್ರಾಂಶುಪಾಲರನ್ನು(08251-230390, 236340) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here