ಮದರಸ ಪಬ್ಲಿಕ್ ಪರೀಕ್ಷೆ: ಮಾಂತೂರು ಹಿದಾಯತುಲ್ ಇಸ್ಲಾಂ ಮದರಸಕ್ಕೆ ನೂರು ಶೇಕಡಾ ಫಲಿತಾಂಶ

0

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಮಾಂತೂರು ಹಿದಾಯತುಲ್ ಇಸ್ಲಾಂ ಮದರಸ ಸತತ ಹದಿನೈದನೇ ಬಾರಿ ನೂರು ಶೇಕಡಾ ಫಲಿತಾಂಶ ಪಡೆದುಕೊಂಡಿದೆ. ಹತ್ತನೇ ತರಗತಿಯ ಎಲ್ಲಾ ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಏಳನೇ ತರಗತಿಯಲ್ಲಿ ಇಬ್ಬರು ಡಿಸ್ಟಿಂಕ್ಷನ್ ಪಡೆದುಕೊಂಡರೆ ಒಂಬತ್ತು ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಒಬ್ಬ ವಿಧ್ಯಾರ್ಥಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐದನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಥಮ, ಇಬ್ಬರು ದ್ವಿತೀಯ ಮತ್ತು ಎಂಟು ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಮದ್ರಸ ಅಧ್ಯಾಪಕರಾದ ಸಿದ್ದೀಕ್ ಮುಸ್ಲಿಯಾರ್ ಮತ್ತು ಶರೀಫ್ ಮುಸ್ಲಿಯಾರ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here