ಒಕ್ಕಲಿಗಸ್ವಸಹಾಯ ಟ್ರಸ್ಟ್ ಪುತ್ತೂರುನಿಂದ ಧನಸಹಾಯ

0

 

 

ಪುತ್ತೂರು : ಗೋಳಿತೊಟ್ಟು ಒಕ್ಕಲಿಗ ಸ್ವ ಸಹಾಯ ಒಕ್ಕೂಟದ ಬಾಂಧವ್ಯ ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯೆ ರೋಹಿಣಿಯವರು ತಲೆಯಲ್ಲಿ ಗಡ್ಡೆಯ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ವತಿಯಿಂದ ಧನಸಹಾಯದ ಚೆಕ್ ವಿತರಿಸಲಾಯಿತು. ಗೋಳಿತೊಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಗೌಡ ಪಠೇರಿರವರು ಚೆಕ್ ಹಸ್ತಾಂತರಿಸಿದರು. ಗೋಳಿತೊಟ್ಟು ಸ್ವಸಹಾಯ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಅನಿಲ, ವಲಯದ ಮೇಲ್ವಿಚಾರಕ ಸುಮಲತ, ನೆಲ್ಯಾಡಿ ವಲಯದ ಪ್ರೇರಕ ಪರಮೇಶ್ವರ ಗೌಡ ಕೊಂಬಾರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು. ಒಕ್ಕಲಿಗ ಮಹಿಳಾ ಗ್ರಾಮಸಮಿತಿ ಗೋಳಿತೊಟ್ಟು ಘಟಕದ ಅಧ್ಯಕ್ಷೆ ಅಮಿತಾ ಸ್ವಾಗತಿಸಿ ಪ್ರೇರಕ ಪರಮೇಶ್ವರ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here