ಎ. 22: ಕಲ್ಕಾರು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ನೇಮ, ಧಾರ್ಮಿಕ ಕಾರ‍್ಯಕ್ರಮ, ಸಹಕಾರಿ ರತ್ನ ಪುರಸ್ಕೃತ ಸವಣೂರು ಸೀತಾರಾಮ ರೈಯವರಿಗೆ ಸನ್ಮಾನ

0

ಪುತ್ತೂರು: ಕಲ್ಕಾರು ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದಲ್ಲಿ ಕುಟುಂಬ ದೈವ ದೇವರ ವಾರ್ಷಿಕ ನೇಮ, ಧಾರ್ಮಿಕ ಕಾರ‍್ಯಕ್ರಮ, ಸಹಕಾರಿ ರತ್ನ ಪುರಸ್ಕೃತ ಸವಣೂರು ಸೀತಾರಾಮ ರೈಯವರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಎ. 22 ರಂದು ನಡೆಯಲಿದೆ.

 

ಎ.22 ರಂದು ಬೆಳಿಗ್ಗೆ 8ರಿಂದ ಗಣಪತಿ ಹೋಮ, ನಾಗತಂಬಿಲ, ಸತ್ಯನಾರಾಯಣ ಪೂಜೆ, ವೆಂಕಟ್ರಮಣ ದೇವರ ಮುಡಿಪುಕಟ್ಟುವುದು, 11.45 ಕ್ಕೆ ಸನ್ಮಾನ ಕಾರ‍್ಯಕ್ರಮ, ಪ್ರತಿಭಾ ಪುರಸ್ಕಾರ ನಡೆಯಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕ ರಾಜೇಶ್ ನಾಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಳಾಗಿ ನಿವೃತ್ತ ಲೋಕಸೇವಾ ಆಯುಕ್ತ ಟಿ.ಶ್ಯಾಮ ಭಟ್, ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ರಂಗೋಲಿರವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಟ್ಲ ಸತೀಶ್ ಶೆಟ್ಟಿರವರು ನಾಯಕತ್ವದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಸವಣೂರು ಕೆ.ಸೀತಾರಾಮ ರೈಯವರನ್ನು ಸನ್ಮಾನಿಸಲಾಗುವುದು. ಪುರುಷೋತ್ತಮ್ ಭಂಡಾರಿ ಅಡ್ಯಾರ್‌ರವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಪುಷ್ವವತಿ ವಿಶ್ವನಾಥ ರೈ ಕಲ್ಕಾರು-ಕೆಂಜಿಲ ಸ್ಮರಣಾರ್ಥ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಸಭೆಯ ಬಳಿಕ ಹನುಮಗಿರಿ ಮೇಳದವರಿಂದ ದಕ್ಷಯಜ್ಞ- ಅಭಿಮನ್ಯ-ಶ್ರೀನಿವಾಸ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 6.30ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ದೈವಗಳಿಗೆ ನೇಮೋತ್ಸವ ಮತ್ತು ಎ. ೨೩ ರಂದು ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ ಎಂದು ಕಲ್ಕಾರು ಕುಟುಂಬದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here