ಟೆಕ್ಸ್‌ಟೈಲ್ಸ್‌ಗಳ ಬೃಹತ್ ಮಳಿಗೆ ಪರಾಗ್ ಫ್ಯಾಬ್ ಶುಭಾರಂಭ

0

ಪುತ್ತೂರು: ಎಲ್ಲಾ ತರಹದ ಟೆಕ್ಸ್‌ಟೈಲ್ಸ್‌ಗಳ ಬೃಹತ್ ಮಳಿಗೆಯಾದ ಪರಾಗ್ ಫ್ಯಾಬ್ ಕೋರ್ಟ್ ರಸ್ತೆಯಲ್ಲಿರುವ ಫಾರ್ಚ್ಯುನ್ ಮಹಲ್ ನಲ್ಲಿ ಶುಭಾರಂಭಗೊಂಡಿತು. ಪುತ್ತೂರು ಮುದರ್ರಿಸ್ ಅಸಯ್ಯದ್ ಅಹಮ್ಮದ್ ಪೂಕೋಯ ತಂಞಳ್‌ರವರು ನೂತನ ಮಳಿಗೆಯನ್ನು ದುವಾಃ ಆಶೀರ್ವಚನ ನೀಡುವ ಮೂಲಕ ಉದ್ಘಾಟಿಸಿದರು.

 

ಬಳಿಕ ಮಾತನಾಡಿದ ಅವರು ಪುತ್ತೂರಿನಲ್ಲಿ ಇಂತಹ ಮಳಿಗೆ ಬಹಳ ಅಗತ್ಯವಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಅಬ್ಬಾಸ್ ಫೈಝಿ ಪುತ್ತಿಗೆ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ ಅಬ್ದುಲ್ ರಜಾಕ್ ಹಾಜಿ, ಪುತ್ತೂರು ಸಿಟಿ ಗೋಲ್ಡ್‌ನ ಪಾಲುದಾರ ಆದಂ ಹಾಜಿ, ಮಾಡನ್ನೂರು ಮಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಬಪ್ಪಳಿಗೆ ಮಸೀದಿಯ ಖತೀಬ್ ಉಮ್ಮರುಲ್ ಫಾರೂಕ್ ಸಹದಿ, ಸ್ವಾದಿಕ್ ಹನೀಫಿ ಕುಂಬ್ರ, ಪುತ್ತೂರು ಜುಮ್ಮಾ ಮಸೀದಿಯ ಸಹಾಯಕ ಗುರುಗಳಾದ ಮಹಮ್ಮದ್ ಅಶ್ರಫ್ , ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಸಹಾಯಕ ಗುರುಗಳಾದ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಬಪ್ಪಳಿಗೆ ಮಸೀದಿಯ ಮಾಜಿ ಅಧ್ಯಕ್ಷ ದಾವುದ್ ಬಪ್ಪಳಿಗೆ,ಚಮಕ್ ಸೆಂಟರ್ ನ ಮಾಲಕ ಇಕ್ಬಾಲ್ ಚಮಕ್, ಬರೋಡಾ ಬ್ಯಾಂಕ್‌ನ ಮೆನೇಜರ್ ಮತ್ತು ಒಯಸೀಸ್ ಬ್ಯಾಂಕ್ ಮೆನೇಜರ್ ರಾಣಿ ಟಿ.ಎಲ್., ಸುಧಾ ಫ್ಯಾನ್ಸಿಯ ಮಾಲಕ ಚಂದ್ರಶೇಖರ್, ಟಾಪ್ಕೋ ಝುಂ ಝುಂ ಮಾಲಕ ಟಿ.ಕೆ. ಮುಹಮ್ಮದ್, ಬಿಲ್ಡಿಂಗ್ ಮಾಲಕ ಅಬ್ದುಲ್ಲಾ ಕುಂಞಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಪರಾಗ್ ಫ್ಯಾಬ್ ಟೆಕ್ಸ್‌ಟೈಲ್ಸ್ ಮಾಲಕ ಉಸ್ಮಾನ್ ಘನಿ, ಅಬ್ದುಲ್ ಖುದ್ದೂಸ್, ಸಯ್ಯದ್ ಮಹಮ್ಮದ್ ಇರ್ಷಾದ್, ಅಬ್ದುಲ್ ಜಬ್ಬಾರ್, ಅಬ್ದುಲ್ ಹಕ್, ಸುಹೈಲ್ ಮೊದಲಾದವರು ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here