ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಕಿಲ್ಲೆ ಸಂಸ್ಮರಣೆ, ಸನ್ಮಾನ

0

  • ಕಿಲ್ಲೆಯವರ ಸಿದ್ದಾಂತ ಅವರಿಗೆ ಸಾವಿಲ್ಲದಂತೆ ಮಾಡಿದೆ -ಮಹೇಶ್ ಕಜೆ
  • ದೈವಭಕ್ತ ಮತ್ತು ದೇಶಭಕ್ತ‌ನ ಗುಣಗಳು ಮೈಗೂಡಿಕೊಂಡಿವೆ – ಕಡಮಜಲು
  • ಬದುಕು ಸ್ವಾವಲಂಬಿ ಮತ್ತು ಸ್ವಾಭಿಮಾನದಿಂದಿರಬೇಕು – ಡಾ. ರವಿ ಶೆಟ್ಟಿ

 

ಪುತ್ತೂರು: ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್ ಎಸ್. ಕಿಲ್ಲೆ ಸಂಸ್ಮರಣೆ, ಕಡಮಜಲು ಸುಭಾಸ್ ರೈಯವರ ದ.ಕ. ಜಿಲ್ಲಾ‌ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂಭ್ರಮದ ಅಂಗವಾಗಿ ಸನ್ಮಾನ, ಕಿಲ್ಲೆ ಮರಿಮಗ ಶರಣ್ ಮತ್ತು ಆಜ್ಞಾ ದಂಪತಿಯ ಮದುವೆ ಔತಣ ಕೂಟ ಸಮಾರಂಭ ಮೇ 15 ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಿತು.

ಕಿಲ್ಲೆಯವರ ಬದುಕಿನ ಸಿದ್ದಾಂತಗಳು ಅವರಿಗೆ ಸಾವಿಲ್ಲದಂತೆ ಮಾಡಿವೆ – ಮಹೇಶ್ ಕಜೆ
ಕಿಲ್ಲೆ ಭಾವಚಿತ್ರದ ಎದುರು ದೀಪ ಬೆಳಗಿಸಿ ಕಿಲ್ಲೆ ಸಂಸ್ಮರಣೆ ಮಾಡಿದ ನ್ಯಾಯವಾದಿ, ಸರಕಾರಿ ಅಭಿಯೋಜಕ ಮಹೇಶ್ ಕಜೆಯವರು ಮಾತನಾಡಿ ‘ಕಿಲ್ಲೆಯವರು ಸಿದ್ದಾಂತಗಳೊಡನೆ ಬದುಕಿದವರು. ಹಾಗಾಗಿ ರಾಮ, ಕೃಷ್ಣರಂತೆ ಅವರ ಜೀವನಕ್ಕೂ ಸಾವಿಲ್ಲದಂತಾಗಿದೆ. ಇವರ ವ್ಯಕ್ತಿತ್ವ ಏಳೇಳು ಜನ್ಮಕ್ಕೆ ಅನಾವರಣಗೊಳ್ಳುವಂತದ್ದು. ಸರಳತೆ, ಛಲವಾದಿತನ, ಭಾಷಾಭಿಮಾನ, ಕಲಾರಾಧನೆ ಇವೆಲ್ಲಕ್ಕಿಂತ ಮುಖ್ಯವಾಗಿ ಸ್ವಾಭಿಮಾನದ ಬದುಕಿನ ಸಿದ್ದಾಂತದಲ್ಲಿ ನಡೆದವರು ಕಿಲ್ಲೆಯವರು’ ಎಂದರು. ಕಿಲ್ಲೆಯವರ ಮಾತು ವ್ಯಕ್ತಿತ್ವ ಬೆಲೆಕಟ್ಟಲಾಗದ ಸಂಪತ್ತು. ಅದಕ್ಕೆ ಎಲ್ಲೆಡೆಯೂ ಮಾನ್ಯತೆ‌ ಇತ್ತು ಎಂದ ಕಜೆಯವರು ಅಂತಹ ಕಿಲ್ಲೆಯವರ ಸಿದ್ದಾಂತವನ್ನು ಮುಂದಿನ ಜನಾಂಗಕ್ಕೆ ನೀಡುತ್ತಿರುವ ಕಡಮಜಲು ಸುಭಾಸ್ ರೈಯವರೂ ನಿಷ್ಕಲ್ಮಶ ಮತ್ತು ಮುಗ್ದತೆಯಲ್ಲಿ 75 ರ ಹರೆಯದಲ್ಲೂ ನವ ಯುವಕನಂತೆ ಚಟುವಟಿಕೆಯಲ್ಲಿದ್ದಾರೆ. ಸುಭಾಸ್ ರೈಯವರು ಕಿಲ್ಲೆಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅದನ್ನು ಪಸರಿಸುವ‌ ಕಾರ್ಯ ಮಾಡುತ್ತಿರುವುದು ಕಿಲ್ಲೆಯವರಿಗೆ ಸಲ್ಲುವ ನಿಜವಾದ ಸಂಸ್ಮರಣೆಯಾಗಿದೆ’ ಎಂದರು. ತನ್ನ ಮಾತಿನ ಕೊನೆಯಲ್ಲಿ ಕಿಲ್ಲೆಯವರ ಬಗ್ಗೆ ಬರೆದ ಸ್ವರಚಿತ ಕವನ ವಾಚಿಸಿ ‘ಕಿಲ್ಲೆಯವರಿಗೆ ಕಿಲ್ಲೆಯವರೇ ಉಪಮೆ’ ಎಂದರು.

ದೈವಭಕ್ತ ಮತ್ತು ದೇಶಭಕ್ತನ ಆದರ್ಶ – ಸುಭಾಸ್ ರೈ
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕಡಮಜಲು ಸುಭಾಸ್ ರೈಯವರು ತನ್ನ ಜೀವನ ಯಶೋಗಾಥೆಯನ್ನು ಸಭೆಯ ಮುಂದಿಟ್ಟರು. ’54 ವರ್ಷಗಳಲ್ಲಿ ನಾನು ಕೃಷಿಯಲ್ಲಿ ಮಾಡಿದ ಸಾಧನೆ ಕಡಮಜಲಿನ‌‌ ಮಣ್ಣನ್ನು ಬಂಗಾರವಾಗಿಸಿದೆ. ಪ್ರತೀ ಬೆವರಿನ ಹನಿಯೂ ಕಡಮಜಲನ್ನು ಸ್ವರ್ಣಮಜಲನ್ನಾಗಿಸಿದೆ. ನನ್ನ ತಂದೆ ದೈವಭಕ್ತ ಮುಂಡಾಳಗುತ್ತು ಮಾಯಿಲ ರೈ, ಮಾವ ದೇಶಭಕ್ತ ಎನ್.ಎಸ್. ಕಿಲ್ಲೆಯವರ ಆದರ್ಶ ಗುಣಗಳು ನನ್ನಲ್ಲಿ ಮೈಗೂಡಿವೆ. ಈ ಸಾಧನೆಗಳ ಹಿಂದೆ ಪ್ರಶಸ್ತಿಗಳು ಅರಸಿ ಬಂದಿರುವುದು ಮನಸ್ಸಿಗೂ ನೆಮ್ಮದಿ ತಂದಿದೆ’ ಎಂದರು.

ಸುಭಾಸ್ ರೈವರು ಪುರಸ್ಕೃತರಾಗಿರುವ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ‌ಯ ಸಂಭ್ರಮವನ್ನು, ಸಾಮಾಜಿಕ ಕಾರ್ಯಕರ್ತ, ಮುಗೇರು ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ‌ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರನ್ನು ಸನ್ಮಾನಿಸುವ‌ ಮೂಲಕ ಆಚರಿಸಿದರು. ವೇದಿಕೆಯಲ್ಲಿದ್ದ ಅತಿಥಿಗಳನ್ನು ಕಡಮಜಲುರವರು ಸ್ವಾಗತಿಸಿ, ಶಾಲು, ಪುಷ್ಪ ನೀಡಿ ಗೌರವಿಸಿದರು.

 

ಸ್ವಾವಲಂಬಿ, ಸ್ವಾಭಿಮಾನಿ‌ ಮತ್ತು ನೆರವು ಸಾರ್ಥಕ ಜೀವನ – ಡಾ. ರವಿ ಶೆಟ್ಟಿ
ಸನ್ಮಾನ ನೆರವೇರಿಸಿದ ಉದ್ಯಮಿ, ಸಮಾಜಸೇವಕ ಮೂಡಂಬೈಲು ಡಾ. ರವಿಶೆಟ್ಟಿ ಕತ್ತಾರ್ ರವರು ಮಾತನಾಡಿ ‘ಇನ್ನಷ್ಟು ಸಮಾಜಸೇವೆ ಮಾಡುವ ಸತ್‌ಪ್ರೇರಣೆಯನ್ನು‌ ದೇವರು ನೀಡಲಿ ಎಂದು ರಾಕೇಶ್ ರೈ ಕಡೆಂಜಿಯವರಿಗೆ ಶುಭ ಹಾರೈಸಿದರು. ‘ಕಿಲ್ಲೆಯವರ ನಾಲಗೆಯಲ್ಲಿ ಸರಸ್ವತಿ‌ ನರ್ತಿಸಿದ್ದಂತೆ ಇಂದು ಕಿಲ್ಲೆಯವರ ಬಗ್ಗೆ ಮಾತನಾಡಿದ ಮಹೇಶ್ ಕಜೆಯವರ ನಾಲಗೆಯಲ್ಲೂ ಸರಸ್ವತಿ ನರ್ತಿಸಿದ್ದಾಳೆ. ಕಿಲ್ಲೆಯವರ ಹೆಸರು ಕೇಳಿದ್ದೆ.‌‌ ಆದರೆ ಅವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುವ ಯೋಗ ಇಂದು ನನ್ನ ಪಾಲಿಗೆ ಒದಗಿ ಬಂತು. ಜೀವನ ಎಂಬದು ಬದುಕಿನ ಸಂತೋಷಕ್ಕೆ ಸೀಮಿತವಾಗಬಾರದು. ಸ್ವಾವಲಂಬನೆ, ಸ್ವಾಭಿಮಾನದ ಬದುಕು, ಸಹಾಯಹಸ್ತದ ಮನೋಭಾವವೇ ಸಾರ್ಥಕ ಜೀವನವಾಗುತ್ತದೆ ಎಂಬ ಸಿದ್ದಾಂತದಲ್ಲಿ ನಾನು ನಂಬಿಕೆಯಿಟ್ಟವ’ ಎಂದು ಹೇಳಿ ಕಡಮಜಲು ಸುಭಾಸ್ ರೈ ಯವರ ಪರಿಸರ ಪ್ರೀತಿಯನ್ನು ಹೊಗಳಿದರು. ಆತಿಥ್ಯಕ್ಕಾಗಿ ವಂದಿಸಿದರು.

ಗೌರವಾರ್ಪಣೆ: ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಿಲ್ಲೆ ಪ್ರತಿಷ್ಠಾನದ ‌ಉಪಾಧ್ಯಕ್ಷರೂ ಆದ ಬೆದ್ರುಮಾರು ಜೈಶಂಕರ ರೈಯವರನ್ನು ಗೌರವಿಸಲಾಯಿತು. ಪತ್ರಕರ್ತ ಉಮೇಶ್ ಮಿತ್ತಡ್ಕರವರನ್ನು ಕಡಮಜಲುರವರು ಗೌರವಿಸಿದರು.

ಕಿಲ್ಲೆ ಸಮಗ್ರ-ದಾಖಲೆ-ದರ್ಶನ ಬಿಡುಗಡೆ
ಇದೇ ವೇಳೆ ಕಿಲ್ಲೆಯವರ ಬದುಕು ಮತ್ತು ಪ್ರತಿಷ್ಠಾನ ನಡೆದು ಬಂದ ದಾರಿಯ ಅವಲೋಕನದ ‘ಕಿಲ್ಲೆ ಸಮಗ್ರ – ದಾಖಲೆ – ದರ್ಶನ’ ವನ್ನು ಬಿಡುಗಡೆಗೊಳಿಸಲಾಯಿತು. ಕಿಲ್ಲೆಯವರ ಹೆಸರು ಶಾಶ್ವತವಾಗಿಸುವ‌ ನಿಟ್ಟಿನಲ್ಲಿ‌ ಮಂಗಳೂರಿನ ಜಪ್ಪು ವೃತ್ತಕ್ಕೆ ಕಿಲ್ಲೆ ವೃತ್ತ ನಾಮಕರಣ ಮಾಡಲು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ರವರ ಮುಖೇನ ಮಂಗಳೂರು ಮಹಾನಗರ ಪಾಲಿಕೆಗೆ ದಾಖಲೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಅದನ್ನು ಅರುಣಾ ಶಶಿಕುಮಾರ್ ಶೆಟ್ಟಿಯವರಿಗೆ ಸುಭಾಸ್ ರೈ ಹಸ್ತಾಂತರಿಸಿದರು.

ವೇದಿಕೆಯಲ್ಲಿ ರಾಮಚಂದ್ರ ಆಳ್ವ, ಕಿಲ್ಲೆ ಪ್ರತಿಷ್ಠಾನದ ಸದಸ್ಯ, ಕಿಲ್ಲೆ ಸೋದರಳಿಯ ಪಿ.‌ ಸುಧಾಕರ ಹೆಗ್ಡೆ, ಕೋಶಾಧಿಕಾರಿ ಕೆದಂಬಾಡಿ ಬೀಡು ಚಂದ್ರಹಾಸ ಬಲ್ಲಾಳ್ ಉಪಸ್ಥಿತರಿದ್ದರು.

ಕಿಲ್ಲೆ ಮೊಮ್ಮಗಳು ಅರುಣಾ ಶಶಿಕುಮಾರ್ ಶೆಟ್ಟಿ ಪ್ರಾರ್ಥಿಸಿದರು. ಕಿಲ್ಲೆ ಪ್ರತಿಷ್ಠಾನದ ಸದಸ್ಯರಾದ ಮುಂಡಾಳಗುತ್ತು ಪ್ರಶಾಂತ್ ರೈ ವಂದಿಸಿದರು. ಇನ್ನೋರ್ವ ಸದಸ್ಯ ಮುಂಡಾಳಗುತ್ತು ಮೋಹನ ಆಳ್ವ ಕಾರ್ಯಕ್ರಮ‌ ನಿರೂಪಿಸಿದರು.

LEAVE A REPLY

Please enter your comment!
Please enter your name here