ಕುಂಡಾಜೆ ಕಿ.ಪ್ರಾ.ಶಾಲಾ ಆರಂಭೋತ್ಸವ

0

ರಾಮಕುಂಜ: ರಾಮಕುಂಜ ಗ್ರಾಮದ ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲಾ 2022-23ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೇ 16ರಂದು ನಡೆಯಿತು.

 

ಶಾಲಾ ದ್ವಾರದಲ್ಲಿ ಮಕ್ಕಳನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಶಿಕ್ಷಣದ ಮಹತ್ವ ಸಾರುವ ಘೋಷಣೆಗಳ ಫಲಕಗಳನ್ನು ವಿದ್ಯಾರ್ಥಿಗಳು ಹಿಡಿದಿದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು, ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಳಿಕ ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀಯವರ ಅಧ್ಯಕ್ಷತೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಎಸ್‌ಡಿಎಂಸಿ ಸದಸ್ಯರಾದ ಪದ್ಮಾವತಿ, ಯಮುನ, ಚೆನ್ನಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಪಿ.ಎಸ್.ನಾರಾಯಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಲಾಯಿತು. ಸರಕಾರದಿಂದ ನೀಡಲಾದ ಪಠ್ಯ ಪುಸ್ತಕಗಳನ್ನು ತರಗತಿವಾರು, ವಿಷಯವಾರು ವಿತರಿಸಲಾಯಿತು. ಶ್ರೀಮತಿ ಸ್ವಾತಿ, ಶಾಲಾ ಶಿಕ್ಷಕಿ ಪುಷ್ಪಾವತಿ ಎಂ.,ರವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ್ದ ಬರೆಯುವ ಪುಸ್ತಕಗಳನ್ನು ಸಭೆಯಲ್ಲಿ ವಿತರಿಸಲಾಯಿತು. ಕೊಯಿಲ ಶಾಲಾ ನಿವೃತ್ತ ಮುಖ್ಯಗುರು ಕುಶಾಲಪ್ಪ ಪಿ.,ಇವರು ಮಕ್ಕಳಿಗೆ ಲೇಖನ ಸಾಮಾಗ್ರಿ, ಬರೆಯುವ ಪುಸ್ತಕಗಳನ್ನು ನೀಡಿದರು. ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ವರ್ಷ-೨೦೨೨ರ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿನಿ ಯಶ್ಮಿತ ಸಿಹಿ ತಿಂಡಿ ವಿತರಿಸಿದರು. ಸಹಶಿಕ್ಷಕಿ ಪುಷ್ಪಾವತಿ ಎಂ.,ವಂದಿಸಿದರು.

LEAVE A REPLY

Please enter your comment!
Please enter your name here