ಜೂ.1- ಅಜಿರಂಗಳ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ-ಪೂರ್ವಭಾವಿ ಸಭೆ

0

ಚಿತ್ರ: ಸುಧಾಕರ್ ಕಾಣಿಯೂರು

 

 

ಕಾಣಿಯೂರು: ಬೆಳಂದೂರು ಗ್ರಾಮದ ಅಜಿರಂಗಳ ಎಂಬಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಜೂ೧ರಂದು ಬ್ರಹ್ಮಶ್ರೀ ವೇ.ಮೂ.ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಇವರ ನೇತೃತ್ವದಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಕಾಣಿಯೂರು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲು ಮಾದೋಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಮತ್ತು ಪರಿಹಾರಕ್ಕಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಜನತೆಯ ಸಹಕಾರದಿಂದ ಅತೀ ಶೀಘ್ರದಲ್ಲಿ ಸುಂದರ ದೇವಸ್ಥಾನ ನಿರ್ಮಾಣಗೊಳ್ಳಲಿ ಎಂದವರು ದೇವಸ್ಥಾನದ ನಿರ್ಮಾಣದ ಸಂಪರ್ಕಕ್ಕಾಗಿ ಸೇತುವೆ ನಿರ್ಮಾಣದ ಅಗತ್ಯವೂ ಇದೆ ಎಂದರು. ಶಿಲಾನ್ಯಾಸ ಕಾರ್ಯಕ್ರಮಗಳ ರೂಪುರೇಶೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಭಟ್ ನಾರ್ಯ, ಪ್ರಶಾಂತ್ ಭಟ್ ಕಟ್ಟತ್ತಾರು, ಉದಯ ರೈ ಮಾದೋಡಿ, ವಸಂತ ರೈ ಕಾರ್ಕಳ, ಅಣ್ಣು ಆಚಾರ್ಯ ಅಬೀರ, ಮಾಧವ ಗೌಡ ಮಿತ್ತಮೂಲೆ, ಶೇಖರ ಗೌಡ ಅಬೀರ ಮೇಗಿನಮನೆ, ಜಯಂತ ಅಬೀರ, ಸುಧಾಕರ ಆಚಾರ್ಯ ಅಬೀರ, ರಾಜೇಶ್ ಮೀಜೆ, ಮೋಹನ್ ಅಗಳಿ, ಕುಶಾಲಪ್ಪ ಗೌಡ, ಸುಧಾಕರ್ ಕಂಡೂರು, ರಾಮಣ್ಣ ಗೌಡ ಮಾದೋಡಿ, ಶೇಷಪ್ಪ ಗೌಡ ಅಬೀರ, ದೀಕ್ಷಿತ್ ಅಬೀರ ಹೊಸೊಳಿಗೆ, ಮೋಹಿತ್ ಅಬೀರ ಕಾಯೆರ್‍ತಡಿ, ಹೊನ್ನಪ್ಪ ಗೌಡ ಹೊಸೊಕ್ಲು, ದೇರಣ್ಣ ಗೌಡ ನೀರಜರಿ, ವಿಷ್ಣು ಗೌಡ ಅಬೀರ, ಚಂದಪ್ಪ ಗೌಡ ಹೊಸೊಕ್ಲು, ವೆಂಕಟ್ರಮಣ ಗೌಡ ಮತ್ತೀತರರು ಉಪಸ್ಥಿತರಿದ್ದರು.

 

ಕಪ್ಪುಶಿಲೆಯ ಕೆತ್ತನೆಯಲ್ಲಿ ದೇವಸ್ಥಾನ ನಿರ್ಮಾಣ
ದೀನಬಂಧು ರೈ ಮಾದೋಡಿ ಮಾತನಾಡಿ, ಅಜಿರಂಗಳ ಎಂಬಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನವು ಅಂದಾಜು ರೂ ೮ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ದೇವಸ್ಥಾನದ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಪೌಳಿ ಸಹಿತ ಸಂಪೂರ್ಣ ಕಪ್ಪುಶಿಲೆಯ ಕೆತ್ತನೆಯಲ್ಲಿ ನಿರ್ಮಾಣವಾಗಲಿದೆ ಎಂದರು.

ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ನಿಗದಿ
ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳ ಅಂಗವಾಗಿ ವಾಸ್ತು ಶಿಲ್ಪಶಾಸ್ತ್ರಜ್ಞ ಪ್ರಸಾದ ಮುನಿಯಂಗಳ ಇವರ ಸಲಹೆಯಂತೆ ದೇವಸ್ಥಾನ ನಿರ್ಮಾಣದ ಸ್ಥಳ ನಿಗದಿಯು ಮೆ ೧೬ರಂದು ನಡೆಯಿತು. ಈ ಸಂದರ್ಭದಲ್ಲಿ ವಾಸ್ತು ಶಿಲ್ಪಶಾಸ್ತ್ರಜ್ಞ ಪ್ರಸಾದ ಮುನಿಯಂಗಳ, ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲು, ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ಪ್ರಭಾಕರ್ ರೈ ಎಣ್ಮೂರು, ಜಯಸೂರ್ಯ ರೈ ಮಾದೋಡಿ, ವಸಂತ ರೈ ಕಾರ್ಕಳ, ದೀನಬಂಧು ರೈ ಮಾದೋಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here