ವಿಟ್ಲ: ರಸ್ತೆಗೆ ಬಿದ್ದ ವಿದ್ಯುತ್ ಕಂಬ – ಸಂಚಾರ ಅಸ್ತವ್ಯಸ್ತ

0

ವಿಟ್ಲ: ವಿಟ್ಲ ಭಾಗದಲ್ಲಿ ಸುರಿದ ಭಾರಿ ಮಳೆಗೆ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ವಿಟ್ಲ- ಕಲ್ಲಡ್ಕ ರಸ್ತೆಯಲ್ಲಿ  ಮೇ.೧೮ರಂದು ನಡೆದಿದ್ದು, ಘಟನೆಯಿಂದಾಗಿ ಹಲವಾರು ತಾಸುಗಳ ಕಾಲ ವಿಟ್ಲ- ಕಲ್ಲಡ್ಕ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ವಿದ್ಯುತ್ ಕಂಬ ಬಿದ್ದಿದ್ದು, ಕಂಬದೊಂದಿಗೆ  ಹಲಸಿನ ಮರವೊಂದರ ದೊಡ್ಡ ಗಾತ್ರದ ಕೊಂಬೆಯೂ ಬಿದ್ದಿತ್ತು. ಬೆಳಗಿನ ಜಾವದಲ್ಲಿ ಬರುವ ಎಲ್ಲಾ ವಾಹನಗಳು ಅಗಲ ಕಿರಿದಾದ ಪಳಿಕೆ ರಸ್ತೆ ಯನ್ನು ಬಳಸಿ ಬೊಬ್ಬೆಕೇರಿ ಸಂಪರ್ಕ ರಸ್ತೆಯ ಮೂಲಕ ಸಂಚರಿಸಿದವು. ಎರಡೂ ಬದಿಗಳಲ್ಲಿ ವಾಹನಗಳು ಸಂಚರಿಸಿದ ಕಾರಣ ತಾಸುಗಟ್ಟಲೆ ಕಾಲ ಸಂಚಾರ ಸ್ಥಗಿತಗೊಂಡಿತ್ತು. ವಿಟ್ಲ ಪೊಲೀಸರು, ಸಾರ್ವಜನಿಕರ ಸಹಕಾರದೊಂದಿಗೆ ಸುಗಮ ಸಂಚಾರಕ್ಕೆ ಸಹಕರಿಸಿದರು.ಮೆಸ್ಕಾಂ ಸಿಬ್ಬಂದಿಗಳು ಸಕಾಲಿಕ ವಾಗಿ ಕಂಬ ತೆರವುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here