ಮೇ. 26: ಉಪ್ಪಿನಂಗಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ಉಪ್ಪಿನಂಗಡಿ ಮತ್ತು ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಲ್ಯಾಣ ಮಂಡಳಿ ಇದರ ಸಹಯೋಗದೊಂದಿಗೆ ಮೇ. 26ರಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಮತ್ತು ಪಿಡಿಒ. ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

8 ವರ್ಷ ಮೇಲ್ಪಟ್ಟವರು ಮತ್ತು ೬೦ ವರ್ಷದ ಒಳಗಿನವರಿಗೆ ಕಿವಿ, ಮೂಗು, ಗಂಟಲು, ಕಣ್ಣು, ಲಿವರ್, ಬಿ.ಪಿ., ಶುಗರ್, ಕಿಡ್ನಿ, ಮೂತ್ರ ಪರೀಕ್ಷೆ, ರಕ್ತದ ಗುಂಪು ಪರೀಕ್ಷೆ ಸೇರಿ ಸಂಪೂರ್ಣ ದೈಹಿಕ ಪರೀಕ್ಷೆ ಮಾಡುವ ವ್ಯವಸ್ಥೆ ಇರುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ, ಶಿಬಿರಕ್ಕೆ ಬರುವಾಗ ಮಂಡಳಿಯಿಂದ ನೀಡಲಾದ ನೋಂದಾವಣೆ ಕಾರ್ಡು ಅಥವಾ ಆಧಾರ್ ಕಾರ್ಡು ಪ್ರತಿ ತರುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.

LEAVE A REPLY

Please enter your comment!
Please enter your name here