ಬೆಟ್ಟಂಪಾಡಿ ಸರಕಾರಿ ಪ್ರೌಡ ಶಾಲೆಗೆ  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  ಶೇ.80 ಫಲಿತಾಂಶ

0

ನಿಡ್ಪಳ್ಳಿ; ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಒಟ್ಟು 25 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿದ್ದು  20 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 80 ಫಲಿತಾಂಶ ಲಭಿಸಿದೆ. 2 ಡಿಸ್ಟಿಂಕ್ಷನ್, 15 ಪ್ರಥಮ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ನಿತಿನ್ ಕುಮಾರ್ ಕೆ ಶೇ 88.96 ಪಡೆದು ಡಿಸ್ಟಿಂಕ್ಷನ್ ಪಡೆದು  ಶಾಲೆಯಲ್ಲಿ ಪ್ರಥಮ ಸ್ಥಾನಿಯಾಗಿರುತ್ತಾನೆ. ಫಾತಿಮತ್ ಸಫ್ವಾನ ಶೇ 87.68 ಪಡೆದು ಶಾಲೆಗೆ ದ್ವಿತೀಯ ಸ್ಥಾನಿಯಾಗಿರುತ್ತಾಳೆ. ಪ್ರಜ್ವಲ್ ಡಿ, ಅಶ್ವಿತಾ, ಸ್ವಸ್ತಿಕ್ ಕೆ, ಮನೀಶ್, ಮನೀತ್, ಮಹಮ್ಮದ್ ರಾಫಿ, ಮುರಳಿಕೃಷ್ಣ ಎನ್, ಪ್ರಜ್ಞಶ್ರೀ, ಸುನೀತಾ ಕೆ, ಸೀಮಾ, ಫಾತಿಮತ್ ಅಫೀನಾ, ಸಿದ್ಧಾರ್ಥ್ ವಿ. ಎಸ್, ವಂದನಾಶ್ರೀ ಇವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಶಾಲೆಯ ಮುಖ್ಯಗುರು ಸೌಮ್ಯಲಕ್ಷ್ಮೀ  ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here