ಎಸ್.ಎಸ್.ಎಲ್.ಸಿಯಲ್ಲಿ ಬುಳೇರಿಮೊಗ್ರು ಪ್ರೌಢಶಾಲೆಗೆ ‘ಎ’ ಗ್ರೇಡ್ ಫಲಿತಾಂಶ

0


ಪುತ್ತೂರು: 2021-22ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಸಮೀಪದ ಮೊಗ್ರು ಗ್ರಾಮದ ಬುಳೇರಿಮೊಗ್ರು ಸರಕಾರಿ ಪ್ರೌಢಶಾಲೆಗೆ ‘ಎ’ ಗ್ರೇಡ್ ಫಲಿತಾಂಶ ದೊರೆತಿದೆ. ಪರೀಕ್ಷೆಗೆ ಹಾಜರಾದ ಒಟ್ಟು 29 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಡಿ.ಶ್ರದ್ಧಾ 605(96.80%), ಅಮೀನತ್ ಸಪ್ವಾನ 587(93.92), ಅನನ್ಯಾ 558(89.28%), ಪಿ. ಯಕ್ಷಿತ್ 532(85.12%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

LEAVE A REPLY

Please enter your comment!
Please enter your name here