ವಿಟ್ಲ ಸರ್ಕಾರಿ ಐ.ಟಿ.ಐನಲ್ಲಿ 2022-23ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನ

0

ಪುತ್ತೂರು : ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಆಗಸ್ಟ್ 2022ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಉದ್ಯೋಗ ಯೋಜನೆಯಡಿಯ ಎರಡು ದೀರ್ಘಾವಧಿ ವೃತ್ತಿಗಳಾದ Mechanic Electric Vehicle ಮತ್ತು  Industrial Robotics & Digital Manufactruing Technician ವೃತ್ತಿಗಳಿಗೆ ಮೇ.25 ರ 11.00 ಗಂಟೆಯಿಂದ, ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರವೇಶ ಮಾಡಿಕೊಳ್ಳಲಾಗುವುದು. ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (C.O.P.A), ಎಲೆಕ್ಟ್ರೀಷಿಯನ್ (Electrician), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (Electronics Mechanic), ಫಿಟ್ಟರ್ (Fitter), ರೆಪ್ರಿಜರೇಷನ್ ಆಂಡ್ ಏರ್-ಕಂಡೀಷನೀಂಗ್ ಟೆಕ್ನಿಷಿಯನ್ (R&AC Technician). ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ಜೂ. 6 ಆಗಿದ್ದು ಅಭ್ಯರ್ಥಿಗಳು ಮೂಲ ದಾಖಲೆ ಮತ್ತು 2 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಖುದ್ದಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಜೂ.7 ರಿಂದ ೦೮ರವರೆಗೆ Gradation List ಪ್ರಕಟಿಸಲಾಗುವುದು. ಜೂ.9ರಿಂದ 13ರವರೆಗೆ ನೋಡಲ್ ಸಂಸ್ಥೆಗಳಲ್ಲಿ ಪ್ರವೇಶ ನಡೆಯಲಿರುವುದು. ಹೆಚ್ಚಿನ ವಿವರಗಳಿಗಾಗಿ ವಿಟ್ಲ ಸರ್ಕಾರಿ ಐಟಿ.ಐಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ 08255-200052/9845226485/9449242456 ರ ಮೂಲಕ ಸಂಪರ್ಕಿಸಬಹುದು ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here