ಮೇ 31- ಕಡಬ ತಾಲೂಕು ಅರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಕೊರಗಪ್ಪ ಗೌಡ ಬಿಳಿನೆಲೆ ಸೇವಾ ನಿವೃತ್ತಿ

0

ಕಾಣಿಯೂರು: ಕಡಬ ತಾಲೂಕು ಪ್ರಾಥಮಿಕ ಅರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಕೊರಗಪ್ಪ ಗೌಡ ಬಿಳಿನೆಲೆ ಮೇ 31ರಂದು ಸೇವಾ ನಿವೃತ್ತಿಹೊಂದಲಿದ್ದಾರೆ.


ಕೊರಗಪ್ಪ ಗೌಡ ಅವರು 1982ರಲ್ಲಿ ಕೊಳ್ತಿಗೆಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗ್ರೂಪ್ ಡಿ. ನೌಕರನಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಬಳಿಕ ಪುತ್ತೂರು ತಾಲೂಕು ಅರೋಗ್ಯ ಕೇಂದ್ರ, ಪಂಜ, ಸುಬ್ರಹ್ಮಣ್ಯ ತಾಲೂಕು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಭಡ್ತಿ ಹೊಂದಿ 2020 ರಲ್ಲಿ ಪ್ರಥಮ ದರ್ಜೆಸಹಾಯಕ ಆಗಿ ಭಡ್ತಿ ಹೊಂದಿದ್ದರು. ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯಲ್ಲಿ 40 ವರ್ಷ 1 ತಿಂಗಳುಗಳ ಸುದೀರ್ಘ ಕಾಲ ಸರಕಾರಿ ಸೇವೆಗೈದು ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.

LEAVE A REPLY

Please enter your comment!
Please enter your name here