ಉಪ್ಪಿನಂಗಡಿ ಕಾಲೇಜಿನಲ್ಲಿ ಹಿಜಾಬ್, ಕೇಸರಿ ವಿವಾದ

0

  • ವರದಿಗೆ ತೆರಳಿದ್ದ ಮಾಧ್ಯಮದವರಿಗೆ ಹಲ್ಲೆ ಯತ್ನ; ಕೊಠಡಿಯಲ್ಲಿ ಕೂಡಿ ಹಾಕಿ ವಿಡಿಯೋ ಡಿಲಿಟ್!

ಉಪ್ಪಿನಂಗಡಿ: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾರಕಕ್ಕೇರಿರುವ ಹಿಜಾಬ್ ಹಾಗೂ ಕೇಸರಿ ವಿವಾದದ ಘಟನೆಯನ್ನು ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಕೆಲ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾದ ಘಟನೆ ಗುರುವಾರ ನಡೆದಿದೆ.

 


ಹಿಜಾಬ್ ಕುರಿತಾಗಿ ಮೃದು ಧೋರಣೆ ತೋರಿಸಲಾಗುತ್ತಿದೆ ಎಂದು ಆರೋಪಿಸಿ ಒಂದು ಗುಂಪಿನ ಪರವಾದ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಅವರು ಕಾಲೇಜು ವರಾಂಡದಲ್ಲಿ ಗುಂಪಾಗಿ ನಿಂತಿದ್ದರು. ಆಗ ಹಿಜಾಬ್ ಪರವಾದ ಗುಂಪೊಂದು ಅಲ್ಲೇ ಜಮಾಯಿಸಿತ್ತು. ಈ ಬಗ್ಗೆ ಸುದ್ದಿ ತಿಳಿದ ಮಾಧ್ಯಮದವರು ಕಾಲೇಜಿಗೆ ಹೋಗಿದ್ದು, ಹಿಜಾಬ್ ಪರ ಇರುವ ವಿದ್ಯಾರ್ಥಿಗಳ ಗುಂಪು ಏಕಾಏಕಿ ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ ವರದಿಗಾಗಿ ತೆಗೆಯಲಾಗಿದ್ದ ವಿಡಿಯೋವನ್ನು ಕಾಲೇಜಿನ ಕಚೇರಿಯ ಕೊಠಡಿಯಲ್ಲಿ ಮಾಧ್ಯಮದವರನ್ನು ಕೂಡಿಹಾಕಿ ಒತ್ತಾಯ ಪೂರ್ವಕವಾಗಿ ವಿಡಿಯೋ ಡಿಲೀಟ್ ಮಾಡಿ, ಬೆದರಿಕೆಯನ್ನು ಹಾಕಿದರು.


ಈ ಘಟನೆ ಬಗ್ಗೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದರೂ ಅಲ್ಲೇ ಇದ್ದ ಪೊಲೀಸರು ಸ್ಥಳಕ್ಕೆ ತೆರಳದೇ ಮೌನವಾಗಿದ್ದರು ಎಂದು ಆರೋಪ ವ್ಯಕ್ತವಾಗಿದೆ.

 

LEAVE A REPLY

Please enter your comment!
Please enter your name here