ಸುದಾನದಲ್ಲಿ ‘ವಿಶ್ವ ತಂಬಾಕು ರಹಿತ ದಿನ’ದ ಜಾಗೃತಿ ಕಾರ್ಯಕ್ರಮ

0

 

 

ಪುತ್ತೂರು:    ‘ವಿಶ್ವ ತಂಬಾಕು ರಹಿತ ದಿನ’ವನ್ನು ಸುದಾನ ವಸತಿಯುತ ಶಾಲೆಯಲ್ಲಿ  ಮೇ.31ರಂದು  ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಲಿಶಾನ್ ಮಿರಾಂಡ (೧೦ನೇ) ಮಾತನಾಡುತ್ತಾ ತಂಬಾಕಿನಿಂದ ಆಗುವ ದುಷ್ಪರಿಣಾಮ ಮತ್ತು ಇದನ್ನು ತಡೆಯುವಲ್ಲಿ ವಿದ್ಯಾರ್ಥಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಧ್ಯಾಯಿನಿ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು ವಿಜ್ಞಾನ ಸಂಘ ‘ಅವನಿ’ಯು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ತಂಬಾಕು ರಹಿತ ಜೀವನಕ್ರಮದ ಬಗ್ಗೆ ಪ್ರಮಾಣವಚನ ಗೈಯಲಾಯಿತು.

 

LEAVE A REPLY

Please enter your comment!
Please enter your name here