ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು-ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0

  • ನಗರ ಸಭೆ ಪುತ್ತೂರು

ಡಾ. ಯು.ಪಿ. ಶಿವಾನಂದರಿಗೆ ಅಭಿನಂದನೆ

ಕಳೆದ ಎಂಟು ತಿಂಗಳಿನಿಂದ ಸುದ್ದಿಯು ಲಂಚ, ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡಿ ಭ್ರಷ್ಟಾಚಾರ ಮುಕ್ತ ಪುತ್ತೂರು ನಿರ್ಮಾಣ ಮಾಡುವ ಆಂದೋಲನ ಮಾಡುತ್ತಿದೆ. ಈ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಹಳ್ಳಿಯಿಂದ ದಿಲ್ಲಿ ತನಕ ಆಂದೋಲವನ್ನು ಕೊಂಡೋಗಿರುವುದಕ್ಕೆ ಡಾ.ಯು.ಪಿ ಶಿವಾನಂದರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜು.9ರಂದು ಶಾಸಕರ ನೇತೃತ್ವದಲ್ಲಿ ನಡೆಯಲಿರುವ ಜಾಥಾಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪುತ್ತೂರು ಮಾತ್ರವಲ್ಲದೆ ದೇಶದಾದ್ಯಂತ ಭ್ರಷ್ಟಾಚಾರ ಮುಕ್ತವಾಗಬೇಕು ಎನ್ನುವ ಮೋದಿಯ ಕನಸನ್ನು ನನಸು ಮಾಡುವುದು ಹಾಗೂ ಗಾಂಧಿಜಿಯರ ಕನಸನ್ನು ನನಸು ಮಾಡಲು ನಮ್ಮಿಂದ ಅಳಿಲ ಸೇವೆ ಮಾಡಲಾಗುವುದು.
                                                                                                                        -ಜೀವಂಧರ್ ಜೈನ್, ಅಧ್ಯಕ್ಷರು ನಗರ ಸಭೆ ಪುತ್ತೂರು.

 

ಜಾಥಾಗೆ ಬೆಂಬಲ ಇದೆ

ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿಯ ವತಿಯಿಂದ ನಡೆಯುತ್ತಿರುವ ಆಂದೋಲನವಿಂದು ದೇಶದಾದ್ಯಂತ ನಡೆಯುತ್ತಿದೆ. ಇದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಪುತ್ತೂರಿನಂತ ಪುಟ್ಟ ಊರಿನಲ್ಲಿ ಮಾದರಿಯಾಗಿ ಸುದ್ದಿಯು ಆಂದೋಲನ ಮಾಡುತ್ತಿದೆ. ಇದೇ ವಿಚಾರವನ್ನು ದಿಲ್ಲಿಯಲ್ಲಿಯೂ ಪ್ರಸ್ತಾಪಿಸಿರುವುದಕ್ಕೆ ಡಾಯು.ಪಿ ಶಿವಾನಂದರವರಿಗೆ ಅಭಿನಂದನೆಗಳು. ವಾರ್ಡ್‌ಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ರಥದ ಜಾಗೃತಿ ಮೂಡಿಸಲಾಗಿದೆ. ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೇಶದ ಕನಸು. ಗಾಂಧೀಜಿಯವರ ಕನಸನ್ನು ಮೋದಿಯವರು ಮುಂದುವರಿಸುತ್ತಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಯಾಗಿ, ಲಂಚ, ಭ್ರಷ್ಟಾಚಾರ ರಹಿತ ಆಡಳಿತ ದೊರೆಯಬೇಕು ಎಂಬುದು ನಮ್ಮ ಆಶಯ. ಜು.9ರಂದು ನಡೆಯುವ ಜಾಥಾಕ್ಕೆ ನಮ್ಮ ಬೆಂಬಲವಿದೆ.
                                                                                                                           -ವಿದ್ಯಾಆರ್. ಗೌರಿ, ಉಪಾಧ್ಯಕ್ಷರು ನಗರ ಸಭೆ ಪುತ್ತೂರು

LEAVE A REPLY

Please enter your comment!
Please enter your name here