ಬಜತ್ತೂರು: ಹೆಬ್ಬಲಸು ಮರಗಳ ಮಾರಣ ಹೋಮ ಪ್ರಕರಣ; ಮರಗಳನ್ನು ಕಡಿದು ಸಾಗಿಸಿದ ಕುರುಹು ಪತ್ತೆಯಾಗಿದೆ, ಕೇಸು ದಾಖಲಾಗಿದೆ-ಡಿ.ಎಫ್.ಒ.

0

ಪುತ್ತೂರು ಎ.ಸಿ.ಎಫ್. ತಂಡದಿಂದ ಸ್ಥಳ ಪರಿಶೀಲನೆ.

ಉಪ್ಪಿನಂಗಡಿ: ಪುತ್ತೂರು ವಲಯ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಬರುವ ಬಜತ್ತೂರು ಗ್ರಾಮದ ಹೊಸಗದ್ದೆ ಎಂಬಲ್ಲಿ ಇರುವ ಅಕೇಶಿಯಾ ನೆಡುತೋಪುನಿಂದ ಹೆಬ್ಬಲಸು ಮರಗಳನ್ನು ಕಡಿದು ಸಾಗಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲಾಗಿ ಈ ಬಗ್ಗೆ ಕೇಸು ದಾಖಲಾಗಿದೆ ಎಂದು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ. ದಿನೇಶ್ ಕುಮಾರ್ ತಿಳಿಸಿದ್ದಾರೆ.‌

ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಕೆ. ಕಾರ್ಯಪ್ಪ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ನೇತೃತ್ವದ ಅಽಕಾರಿಗಳ ತಂಡ ಜುಲೈ 8ರಂದು ಶುಕ್ರವಾರ ನೆಡುತೋಪುಗೆ ತೆರಳಿ ಪರಿಶೀಲನೆ ನಡೆಸಿ ಕಡಿಯಲಾದ ಹೆಬ್ಬಲಸು ಮರಗಳ ಬುಡ ಮತ್ತು ಅಲ್ಲೇ ಬಿಟ್ಟು ಹೋಗಿರುವ ಮರದ ದಿಮ್ಮಿಗಳ ಸಹಿತ ಕುರುಹುಗಳನ್ನು ಪತ್ತೆ ಮಾಡಿದ್ದಾರೆ. ಅದರಂತೆ ಕೇಸು ದಾಖಲಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಽಕಾರಿ ದಿನೇಶ್‌ರವರು ಸುದ್ದಿಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಸಮಗ್ರ ವರದಿ ಸಲ್ಲಿಸಲು ಸೂಚಿಸಿದ್ದೇನೆ: ಹೆಬ್ಬಲಸು ಮರ ಕಡಿದ ಬಗ್ಗೆ ಮತ್ತು ನೆಡುತೋಪುನಲ್ಲಿ ಕಡಿಯಲಾಗಿರುವ ಅಕೇಶಿಯಾ ಮರಗಳ ಬಗ್ಗೆಯೂ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆಯೂ ಸೂಚಿಸಿರುವುದಾಗಿ ದಿನೇಶ್‌ರವರು ತಿಳಿಸಿದ್ದಾರೆ.

ಪುತ್ತೂರು ವಲಯ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಬರುವ ಬಜತ್ತೂರು ಗ್ರಾಮದ ಹೊಸಗದ್ದೆ ಮತ್ತು ಪೆರಿಯಡ್ಕ ಮಧ್ಯೆ ಇರುವ ಅಕೇಶಿಯಾ ನೆಡುತೋಪು ಮರಗಳ ಕಟಾವು ಹೆಸರಿನಲ್ಲಿ ಅಲ್ಲಿ ಇದ್ದಂತಹ ಬೃಹತ್ ಗಾತ್ರದ ಹೆಬ್ಬಲಸು ಮತ್ತು ಇತರೇ ಉತ್ತಮ ಜಾತಿಯ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ವ್ಯಕ್ತವಾಗಿತ್ತು. ಅದರಂತೆ ಜುಲೈ 8ರಂದು ಸುದ್ದಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

 

ಬಜತ್ತೂರು ಅಕೇಶಿಯಾ ನೆಡುತೋಪುನಿಂದ ಹೆಬ್ಬಲಸು ಮರಗಳ ಮಾರಣ ಹೋಮ, ಅಕ್ರಮ ಸಾಗಾಟ

LEAVE A REPLY

Please enter your comment!
Please enter your name here