ಉಪ್ಪಿನಂಗಡಿ: ‘ನಮ ತೆರಿಯೊನುಗ’ ನಾಟಕ ಮುಹೂರ್ತ

0

ಉಪ್ಪಿನಂಗಡಿ : ಗಯಾಪದ ಕಲಾವಿದೆರ್ – ಉಬಾರ್ ಇವರ ನೂತನ ನಾಟಕ ನಮ ತೆರಿಯೊನುಗದ ಮೂಹೂರ್ತವು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ನೆರವೇರಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಯಂತ ಪೊರೋಳಿ, ತುಳು ರಂಗ ಭೂಮಿಯನ್ನು ಮತ್ತಷ್ಟು ಬೆಳೆಸುವ ಗಯಾಪದ ಕಲಾವಿದರ ಪ್ರಯತ್ನ ಯಶಸ್ಸು ಪಡೆಯಲಿ ಎಂದರು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿನಿಗುತ್ತು, ಉಪ್ಪಿನಂಗಡಿ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿಯ ಚಂದ್ರಶೇಖರ್ ಮಡಿವಾಳ, ನಾಟಕ ರಚನಾ ಕಾರ ನಿರ್ದೇಶಕ ರವಿಶಂಕರ ಶಾಸಿ ಮಣಿಲ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗಯಾಪದ ಕಲಾವಿದೆರ್ ತಂಡದ ಸಾರಥಿ ಬಾಲಕೃಷ್ಣ ಪೂಜಾರಿ ನಿರಾಲ, ಸಂಚಾಲಕ ಕಿಶೋರ್ ಜೋಗಿ ಉಬಾರ್, ಸಂಗೀತ ನಿರ್ದೇಶಕ ಕಾರ್ತಿಕ್ ಮಣಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಕೆದಂಬಾಡಿ ಬಿಡು ಬಿ ರಂಗಯ್ಯ ಬಲ್ಲಾಳ್, ಗುಣಕರ, ರಾಜೇಶ್ ಶಾಂತಿನಗರ, ದೀಪಕ್ ರೈ ಪಾಣಾಜೆ , ಗಂಗಾಧರ ಟೈಲರ್, ಸತೀಶ್ ರೈ, ದಿವಾಕರ, ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here