ಬೆಂಗಳೂರು: ಕರ್ನಾಟಕ ಮರಾಟಿ ಸಂಘದ ಮಹಾಸಭೆಯಲ್ಲಿ ಸುದ್ದಿ ಜನಾಂದೋಲನಕ್ಕೆ ಬೆಂಬಲ; ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ಸ್ವೀಕಾರ

0

ಪುತ್ತೂರು:  ಕರ್ನಾಟಕ ಮರಾಟಿ ಸಂಘ ಬೆಂಗಳೂರು ಇದರ ವಾರ್ಷಿಕ ಮಹಾಸಭೆಯು ಜು. 10 ರಂದು ಬೆಂಗಳೂರಿನ ಎಂ.ಎಸ್. ಪಾಳ್ಯದ ಬಳಿ ಇರುವ ಶ್ರೀ ಜ್ಯೋತಿನಂದಮಯಿ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ನಡೆಯುತ್ತಿರುವ ಲಂಚ ಭ್ರಷ್ಟಾಚಾರ ವಿರೋಧಿ ಆಂದೋಲನದ ಬಗ್ಗೆ ಘೋಷಣೆ ಕೂಗಿ ಪ್ರತಿಜ್ಞೆ ಸ್ವೀಕರಿಸಲಾಯಿತು.

ಸುಳ್ಯ ಸುದ್ದಿ ಬಿಡುಗಡೆ ವಾರಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಆಂದೋಲನದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ, ಘೋಷಣೆ ಕೂಗಿದರು. ವೇದಿಕೆಯಲ್ಲಿದ್ದ ಗಣ್ಯರು, ಸಭಿಕರು ಪ್ರತಿಜ್ಞೆಯನ್ನು ಪುನರುಚ್ಚರಿಸಿ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸಂಘದ ನಿರ್ಗಮಿತ ಸಮಿತಿಯ ಅಧ್ಯಕ್ಷ ನರಸಿಂಹ ನಾಯ್ಕ ತಿಂಡ್ಲು, ಉಪಾಧ್ಯಕ್ಷ ದುರ್ಗಾಪ್ರಸಾದ್ ಮಜೆಕರ್, ಪ್ರಧಾನ ಕಾರ್ಯದರ್ಶಿ ಮೋನಪ್ಪ ನಾಯ್ಕ ಮುಂಡಾಜೆ, ಉಪ ಕಾರ್ಯದರ್ಶಿ ವೆಂಕಪ್ಪ ನಾಯ್ಕ ಕಾಮಾಕ್ಷಿಪಾಳ್ಯ, ಖಜಾಂಜಿ ಮೋಹನ್ ನಾಯ್ಕ ನಾಗಸಂದ್ರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಕರ್ನಾಟಕ ಮರಾಟಿ ಯುವ ವೇದಿಕೆಯ ಅಧ್ಯಕ್ಷ ದಿನೇಶ್ ನಾಯ್ಕ ಬಾಬುಮೂಲೆ, ಕಾರ್ಯದರ್ಶಿ ಉಮೇಶ್ ನಾಯ್ಕ ಮಲ್ಲೇಶ್ವರಂ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಕರ್ನಾಟಕ ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶೋಭ ಎಂ.ಟಿ‌. ತಿಂಡ್ಲು, ಕಾರ್ಯದರ್ಶಿ ಡಾ. ರಶ್ಮೀ ಅಶೋಕ್ ನಾಯ್ಕ ಅಮೃತಹಳ್ಳಿ, ಉಪಾಧ್ಯಕ್ಷೆ ಅಕ್ಕಮ್ಮ ಪ್ರಕಾಶ್ ನಗರ, ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾದ (2022-23) ಅಧ್ಯಕ್ಷ ದುರ್ಗಾಪ್ರಸಾದ್ ಮಜೆಕ್ಕಾರ್, ಉಪಾಧ್ಯಕ್ಷ ಮೋನಪ್ಪ ನಾಯ್ಕ, ಕಾರ್ಯದರ್ಶಿ ಮೋಹನ್ ನಗ್ರಿ, ಉಪಕಾರ್ಯದರ್ಶಿ ವಿಶ್ವನಾಥ್ ನಾಯ್ಕ ಕೋಶಾಧಿಕಾರಿ ದಿನಕರ ನಾಯ್ಕ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸಮಿತಿಯ ಅಧ್ಯಕ್ಷೆ ವಿಜಯಾ ಅಚ್ಚುತ ನಾಯ್ಕ ಉಪಾಧ್ಯಕ್ಷೆ ಸವಿತಾ ಮೋನಪ್ಪ ನಾಯ್ಕ, ಕಾರ್ಯದರ್ಶಿ ಅನುಷಾ ನಿತೇಶ್, ಕರ್ನಾಟಕ ಮಾರಾಟಿ ಯುವ ವೇದಿಕೆಯ ಅಧ್ಯಕ್ಷ ಅಶ್ವಿನ್ ನಾಯ್ಕ, ಉಪಾಧ್ಯಕ್ಷ ಶ್ರೀಧರ್ ನಾಯ್ಕ ಮುಂಡೋವುಮೂಲೆ, ಕಾರ್ಯದರ್ಶಿ ಹರೀಶ್, ಉಪ ಕಾರ್ಯದರ್ಶಿ ಸೌಮ್ಯ ನಾಯ್ಕ, ನಾರಾಯಣ ನಾಯ್ಕ ನಾಗರಬಾವಿ, ಕೃಷ್ಣ ನಾಯ್ಕ ಮಂಜುನಾಥ ನಗರ, ಚಿತ್ತನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ನಿವೃತ್ತ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಂಘದ ಮಾಜಿ ಅಧ್ಯಕ್ಷ ಡಾ. ಸುಂದರ ನಾಯ್ಕ, ಯುವ ಮಾಜಿ ಅಧ್ಯಕ್ಷ ರಾದ ಪಿ ವಿ ನಾಯ್ಕ, ಡಾ. ಶರತ್ ಬಿ.ಕೆ ನಾಯ್ಕ ಸೀತಾ ಬಿ.ಕೆ ನಾಯ್ಕ, ಶ್ರೀಧರ್ ನಾಯ್ಕ ಅರ್.ಟಿ ನಗರ, ವೇದಿಕೆಯ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಮುಗುಳಿ, ಕರ್ನಾಟಕ ಮರಾಟಿ ಸಂಘ ಬೆಂಗಳೂರು ಇದರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here