ರೇಡಿಯೋ ಪಾಂಚಜನ್ಯದಲ್ಲಿ ಭಕ್ತಿಗೀತೆ – ಕವನ ವಾಚನ ಸ್ಪರ್ಧೆ

0

ಪುತ್ತೂರು: ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ನೇತೃತ್ವದಲ್ಲಿ ಇನ್ನರ್ ವೀಲ್ ಸಹಯೋಗದಲ್ಲಿ ಭಕ್ತಿಗೀತೆ ಸ್ಪರ್ಧೆ ಮತ್ತು ಸ್ವರಚಿತ ಕವನವಾಚನ ಸ್ಪರ್ಧೆ ಜು. 15ರಂದು ನೆಹರೂನಗರ ವಿವೇಕಾನಂದ ಪಿ.ಜಿ. ಸೆಮಿನಾರ್ ಹಾಲ್‌ ನಲ್ಲಿ ನಡೆಯಿತು.

ಕುಶಲ ಹಾಸ್ಯಪ್ರಿಯರ ಸಂಘದ ಅಧ್ಯಕ್ಷೆ ಶಂಕರಿ ಶರ್ಮ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ಟೈನಿ ದೀಪಕ್ ಅವರು ಉಪಸ್ಥಿತರಿದ್ದರು. ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ತೀರ್ಪುಗಾರರಾಗಿ ಮಾಲಿನಿ ಯು.ಎಸ್., ಶಾಲಿನಿ ಆತ್ಮಭೂಷಣ, ವಿನಯ ಕೆದಿಲ, ಶಂಕರಿ ಶರ್ಮ, ಮಾನಸ ವಿಜಯ್ ಕೈಂತಜೆ ಮತ್ತು ಮೇಘನಾ ಪಾಣಾಜೆ ಉಪಸ್ಥಿತರಿದ್ದರು.

ಭಕ್ತಿಗೀತೆ ಸ್ಪರ್ಧೆ ಮೊದಲ ವಿಭಾಗದಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಮಾತಾಂಗಿ(ಪ್ರ), ನೆಹರೂನಗರ ವಿವೇಕಾನಂದ ಸಿಬಿಎಸ್‍ಇ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿ ಆದ್ಯಲಕ್ಷ್ಮೀ ಮತ್ತು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಗರೀಮಾ (ದ್ವಿ), ಮುಂಡೂರು ಹಿ.ಪ್ರಾ. ಶಾಲಾ ವಿದ್ಯಾರ್ಥಿ ಅಭಿರಾಮ್ ಕೆ.(ತೃ), ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಪ್ರಣತಿ(ಪ್ರೋತ್ಸಾಹಕ) ಮತ್ತು ಕವನವಾಚನ ಸ್ಪರ್ಧೆಯಲ್ಲಿ ನೆಲ್ಯಾಡಿ ಸಂತ ಜಾರ್ಜ್ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿ ಪ್ರಣಮ್ಯ(ಪ್ರ), ಪುಣಚ ಶ್ರೀದೇವಿ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿ ಆಕಾಂಕ್ಷಾ (ದ್ವಿ), ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸಹನಾ(ತೃ), ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ತನ್ಮಯ ಕೃಷ್ಣ(ಪ್ರೋತ್ಸಾಹಕ) ಹಾಗೂ ಭಕ್ತಿಗೀತೆ ಸ್ಪರ್ಧೆ ಎರಡನೇ ವಿಭಾಗದಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಆದ್ಯತಾ ಎಂ.(ಪ್ರ), ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಕರಣ್‍ ಗೌಡ(ದ್ವಿ), ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಶ್ರೇಯಸ್(ತೃ) ಮತ್ತು ಬಪ್ಪಳಿಗೆ ಅಂಬಿಕಾ ಶಾಲಾ ವಿದ್ಯಾರ್ಥಿ ಸನ್ಮಯಿ (ಪ್ರೋತ್ಸಾಹಕ) ಬಹುಮಾನ ಪಡೆದುಕೊಂಡಿರುತ್ತಾರೆ.

 

LEAVE A REPLY

Please enter your comment!
Please enter your name here