ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ‘ಯಲ್ಲೋ ಡೇ’

0

ರಾಮಕುಂಜ: ಮಕ್ಕಳಿಗೆ ಬಣ್ಣದ ಅರಿವು ಮೂಡಿಸುವ ಉದ್ದೇಶದಿಂದ ರಾಮಕುಂಜ ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ಜು.20ರಂದು ಯಲ್ಲೋ ಡೇ ಆಚರಿಸಲಾಯಿತು.


ವಿವಿಧ ಬಗೆಯ ಹಳದಿ ಹಣ್ಣುಗಳು, ತರಕಾರಿಗಳು, ಪ್ರಾಣಿ ಪಕ್ಷಿಗಳ ಮತ್ತು ಬಗೆ ಬಗೆಯ ಕ್ರಾಫ್ಟ್‌ಗಳನ್ನು ರಚಿಸಿ ಒಂದೆಡೆ ಜೋಡಿಸಿ ಮಕ್ಕಳಿಗೆ ಬಣ್ಣದ ಪರಿಚಯ ಮಾಡಲಾಯಿತು. ಮಕ್ಕಳು ಹಳದಿ ಬಣ್ಣದ ವಸ್ತ್ರಧರಿಸಿ ಕಂಗೊಳಿಸಿದರು. ಮಕ್ಕಳಿಗೆ ಹಳದಿ ಬಣ್ಣದ ವಿವಿಧ ಬಗೆಯ ಮುಖಗವಸು, ಬೆನ್ನಿಗೆ ರೆಕ್ಕೆ ಕಟ್ಟಿ ಹಳದಿ ಪರಂಗವಾಗಿಸಿದರು. ಹಳದಿ ಬಲೂನು, ಆಟಿಕೆಗಳು, ಹಳದಿ ಬಣ್ಣದ ವಿವಿಧ ವಸ್ತುಗಳನ್ನು ಪ್ರದರ್ಶನಕ್ಕಿಡಲಾಯಿತು. ಮಕ್ಕಳಿಗೆ ಮನೋರಂಜನೆಯೊಂದಿಗೆ ಹಳದಿ ಬಣ್ಣದ ಗ್ರಹಣ ಶಕ್ತಿ ಹೆಚ್ಚಿಸಲು ಪ್ರಾಮುಖ್ಯತೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತಾ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here