ಕಬಕದಲ್ಲಿ ಪೊಲೀಸ್ ಪಥ ಸಂಚಲನ – ನಾಗರಿಕರಿಗೆ ಧೈರ್ಯ

0


ಪುತ್ತೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಯಾವುದೇ ಗಲಭೆ ಉಂಟಾಗದಂತೆ ಗಲಭೆಕೋರರಿಗೆ ಎಚ್ಚರಿಕೆಗೆ ನೀಡಲು ಮತ್ತು ನಾಗರಿಕರಿಗೆ ಧೈರ್ಯ ತುಂಬಲು ರಾಜ್ಯ ಮೀಸಲು ಪಡೆಯ ಸಶಸ್ತ್ರ ಪೊಲೀಸರು ಮತ್ತು ನಗರ ಹಾಗು ಸಂಚಾರ ಠಾಣೆಯ ಪೊಲೀಸರು ದ.ಕ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಅವರ ಸೂಚನೆಯಂತೆ ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಮತ್ತು ಇನ್ ಸ್ಪೆಕ್ಟರ್ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಜು. 29ರಂದು ಪುತ್ತೂರು ಪೋಳ್ಯದಿಂದ ಕಬಕ ತನಕ ಪಥ ಸಂಚಲನ ನಡೆಯಿತು.


ಪುತ್ತೂರು ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಡರ್ ಸುನಿಲ್ ಕುಮಾರ್, ಎ.ಎಸ್.ಐ ರಾಧಾಕೃಷ್ಣ, ಸಂಚಾರ ಪೊಲೀಸ್ ಠಾಣೆ ಎಸ್ ಐ ಗಳಾದ ರಾಮ ನಾಯ್ಕ ಮತ್ತು ಎಂ.ಕೆ ಕುಟ್ಟಿ ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here