ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ವಿಜೇತರಿಗೆ ಪ್ರಮಾಣ ಪತ್ರ ವಿತರಣೆ

0

ಪುತ್ತೂರು: ಓದುವ ಬೆಳಕು ಕಾರ್ಯಕ್ರಮದಡಿ ಪುತ್ತೂರು ತಾಲೂಕು ಪಂಚಾಯತ್‌ನಲ್ಲಿ ತಾಲೂಕು ಮಟ್ಟದ  ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದ ಪ್ರಶಸ್ತಿ ಪ್ರಧಾನ ಸಮಾರಂಭ ಆ.6ರ ಮಧ್ಯಾಹ್ನ ನಡೆಯಿತು.

 


ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿ ಪ್ರಶಸ್ತಿಗಳನ್ನು ವಿತರಿಸಿದರು. ನರೇಗ ಸಹಾಯಕ ನಿರ್ದೇಶಕಿ ಶ್ರೀಮತಿ ಶೈಲಜಾ ಭಟ್, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್, ವೀರಮಂಗಲ ಶಾಲಾ ಮುಖ್ಯ ಶಿಕ್ಷಕ ತಾರಾನಾಥ, ತೀರ್ಪುಗಾರರಾದ ಕುಡಿಪ್ಪಾಡಿ ಸ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸ್ಟ್ಯಾನಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ದಾಮೋದರ್, ಬೆಟ್ಟಂಪಾಡಿ ಸ.ಪ್ರೌಢ ಶಾಲೆಯ ಚಂದ್ರಕಲಾ, ಕಬಕ ಸ.ಹಿ.ಪ್ರಾ.ಶಾಲೆಯ ಪ್ರವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಮಾಣ ಪತ್ರ ವಿತರಣೆ:
ಪ್ರಥಮ ಸ್ಥಾನವನ್ನು ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ಆಶಿಕಾ ಎಂ. ದ್ವಿತೀಯ ಸ್ಥಾನವನ್ನು ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ವ್ಯಾಪ್ತಿಯ ಸ.ಪ್ರೌಢ ಶಾಲೆ ನೆಟ್ಟಣಿಗೆ ಮುಡ್ನೂರು ಇದರ ಮಹಮ್ಮದ್ ಸಾಬಿತ್, ತೃತೀಯ ಸ್ಥಾನವನ್ನು ಪಾಣಾಜೆ ಗ್ರಾ.ಪಂ.ವ್ಯಾಪ್ತಿಯ ಸರಕಾರಿ ಪ.ಪೂ.ಕಾಲೇಜು ಬೆಟ್ಟಂಪಾಡಿಯ ಹೇಮಂತ್ ಡಿ.,ಚತುರ್ಥ ಸ್ಥಾನವನ್ನು ಮುಂಡೂರು ಗ್ರಾ.ಪಂ. ವ್ಯಾಪ್ತಿಯ ಎಸ್.ಜಿ.ಎಂ. ಪ್ರೌಢಶಾಲಾ ಭಕ್ತಕೋಡಿ ಸರ್ವೆ ಕೃಪಾ ಕೆ. ಪಡೆದುಕೊಂಡರು.

LEAVE A REPLY

Please enter your comment!
Please enter your name here