ಮೆಸ್ಕಾಂ ಎಇಇ ರಾಮಚಂದ್ರರಿಂದ ಅಂಗಾಂಗ ದಾನಕ್ಕೆ ನೋಂದಾವಣೆ

0

ಪುತ್ತೂರು:ಪುತ್ತೂರು ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರರವರು ಮರಣಾನಂತರ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸುವ ಮೂಲಕ ಮಾದರಿಯಾಗಿದ್ದಾರೆ.

ಆ.13ರಂದು ಡೋನರ‍್ಸ್ ಡೇ ಪ್ರಯುಕ್ತ ಜೀವನ ಸಾರ್ಥಕತೆ ಮೂಲಕ ಅಂಗಾಂಗ ದಾನಕ್ಕೆ ಅವರು ಹೆಸರು ನೋಂದಾಯಿಸಿದ್ದಾರೆ.ಧಾರವಾಡದ ಕೆ.ಎಲ್.ಇ ವಿದ್ಯಾಸಂಸ್ಥೆಯವರು ಡೋನರ‍್ಸ್ ಡೇ ಜಾಗೃತಿಗಾಗಿ ನೀಡಿದ್ದ ಪತ್ರಿಕಾ ಜಾಹೀರಾತನ್ನು ಗಮನಿಸಿದ ರಾಮಚಂದ್ರ ಅವರು ತಮ್ಮ ಕಣ್ಣು, ಕರುಳು, ಕಿಡ್ನಿ, ಹೃದಯ, ಮೇದೋಜೀರಕ ಗ್ರಂಥಿ, ಶ್ವಾಸಕೋಶ, ಹೃದಯ ಕವಚಗಳನ್ನು ಮರಣಾನಂತರ ದಾನ ಮಾಡುವುದಾಗಿ ದಾನ ಪತ್ರದಲ್ಲಿ ನೋಂದಾಯಿಸಿದ್ದಾರೆ.ಮರಣಾನಂತರ ಸುಟ್ಟು ಭಸ್ಮವಾಗುವ ಈ ದೇಹ ಕೆಲವು ಜನರಿಗಾದರೂ ಸಹಾಯಕವಾಗಲಿ ಎಂಬ ಉದ್ದೇಶದಿಂದ ನಾನು ಅಂಗಾಗ ದಾನಕ್ಕೆ ಹೆಸರು ನೋಂದಾಯಿಸಿದ್ದೇನೆ.ಬೇರೆಯವರು ಕೂಡಾ ಇಂತಹ ಕಾರ್ಯ ಮಾಡಲಿ ಎಂದು ಎಇಇ ರಾಮಚಂದ್ರ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here