ಮೆಸ್ಕಾಂ ಕುಂಬ್ರ ಶಾಖಾಧಿಕಾರಿ ನಿತ್ಯಾನಂದ ತೆಂಡೂಲ್ಕರ್ ಕಾರ್ಕಳಕ್ಕೆ ವರ್ಗಾವಣೆ – 33 ಕೆ.ವಿ. ನಿರ್ವಹಣಾ ಘಟಕದಿಂದ ಗೌರವಾರ್ಪಣೆ

0

ಪುತ್ತೂರು: ಮೆಸ್ಕಾಂ ಕುಂಬ್ರ ಶಾಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಇದೀಗ ಕಾರ್ಕಳ ಶಾಖೆಗೆ ವರ್ಗಾವಣೆಗೊಂಡಿರುವ ನಿತ್ಯಾನಂದ ತೆಂಡೂಲ್ಕರ್ ಅವರನ್ನು 33 ಕೆ.ವಿ. ನಿರ್ವಹಣಾ ಘಟಕದ ವತಿಯಿಂದ ಕುಂಬ್ರ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ವತಿಯಿಂದ ನಡೆಯುತ್ತಿರುವ ಲಂಚ ರಹಿತವಾಗಿ ಉತ್ತಮ ಸೇವೆ ನೀಡುತ್ತಿರುವ ಇಲಾಖಾ ಸಿಬ್ಬಂದಿಗಳನ್ನು ಗುರುತಿಸುವ ಅಭಿಯಾನದಲ್ಲಿ ನಿತ್ಯಾನಂದ ತೆಂಡೂಲ್ಕರ್ ಜನರಿಂದ ಆಯ್ಕೆಯಾಗಿ ಶ್ಲಾಘನೆಗೆ ಪಾತ್ರರಾಗಿದ್ದರು. ಸತೀಶ್ ಸೇಡಿಯಾಪು, ಮಣಿಕಂಠ, ರವಿ, ಗಂಗಾಧರ ಮತ್ತು ಸುನಿಲ್ ಗೌರವಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here