ಕುರಿಯ: ಒಕ್ಕಲಿಗ ಗೌಡ ಸೇವಾ ಸಂಘ ಕುರಿಯ ಗ್ರಾಮ ಸಮಿತಿ, ಯುವ ಘಟಕ, ಮಹಿಳಾ ಘಟಕ ಇವುಗಳ ಸಹಕಾರದೊಂದಿಗೆ ಒಕ್ಕಲಿಗ ಸ್ವ ಸಹಾಯ ಸಂಘದ ಒಕ್ಕೂಟ ಕುರಿಯ ಇದರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಊರ ಗೌಡರುಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಸೆ 4 ರಂದು ಉಳ್ಳಾಲ ಕುರಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ನ್ಯಾಯಾಂಗ ಇಲಾಖೆ ಪುತ್ತೂರು ಇದರ ನಿವೃತ್ತ ಶಿರಸ್ತೆದಾರರಾದ ಜೆ ಶಿವರಾಮ ಗೌಡ ಜಾಡೆಂಕಿ ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕೆಯ ಪಾಠದ ಜೊತೆಗೆ ಜೀವನ ನಿರ್ವಹಣೆಯ ಪಾಠವನ್ನು ಕಲಿಯುವುದು ಅನಿವಾರ್ಯವಾಗಿದೆ, ಮೌಲ್ಯಯುತ ಶಿಕ್ಷಣ ಪಡೆದು ವಿದ್ಯಾರ್ಥಿಗಳು ದೇಶದಲ್ಲಿ ಸತ್ಪಜೆಯಾಗಿ ಬೆಳೆಯಬೇಕು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆಯಂತಹ ಕಾರ್ಯಕ್ರಮ ಹಮ್ಮಿಕೊಂಡ ಕುರಿಯ ಒಕ್ಕೂಟದ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಕುಂಬ್ರ ವಲಯದ ಅಧ್ಯಕ್ಷರಾದ ಲೋಕೇಶ್ ಚಾಕೋಟೆ ಮಾತನಾಡಿ ಸ್ವ ಸಹಾಯ ಸಂಘಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರೊಂದಿಗೆ ಸಮಾಜವನ್ನು ಒಗ್ಗೂಡಿಸಬೇಕು,ಆರ್ಥಿಕವಾಗಿ ಸದೃಢವಾಗಬೇಕು, ಸಮುದಾಯದ ಸಂಸ್ಕೃತಿ,ಆಚಾರ ವಿಚಾರಗಳನ್ನು ಹಿರಿಯರ ಮಾರ್ಗದರ್ಶನದಂತೆ ಕಟ್ಟು ನಿಟ್ಟಾಗಿ ಪಾಲಿಸಬೇಕು, ಸಂಘಟಿತ ಮನೋಭಾವವನ್ನು ಬೆಳಿಸಿಕೊಂಡು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಮೂಡಿಬರಬೇಕು ಎಂದರು.
ಓಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಂ ಮಾತನಾಡಿ ಸ್ವ ಸಹಾಯ ಸಂಘದ ಸದಸ್ಯನೋರ್ವನ ಉಳಿತಾಯದೊಂದಿಗೆ,ಇನ್ಯಾವುದೋ ಸಂಘದ ಸದಸ್ಯನಿಗೆ ಸಾಲವಾಗಿ ದೊರೆಯುತ್ತದೆ ಈ ಮೂಲಕ ಅದೆಷ್ಟೋ ಸದಸ್ಯರುಗಳ ಮಕ್ಕಳ ವಿದ್ಯಾರ್ಜನೆಗೆ, ಇನ್ನಿತರ ಶುಭ ಕಾರ್ಯಗಳಿಗೆ ಹಾಗೂ ಜೀವನೋಪಾಯವಾದ ಕೃಷಿಗೆ ಪೂರಕವಾದ ಪಂಪ್ ಖರೀದಿ, ಜಾನುವಾರು ಖರೀದಿ, ಕೃಷಿ ವಿಸ್ತರಣೆಗೆ ಸಾಲ ಸೌಲಭ್ಯವನ್ನು ಪಡೆದುಕೊಂಡಿರುವುದು ಸಂತೋಷದ ವಿಚಾರ ಎಂದರು, ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅವರ ಗ್ರಾಮದಲ್ಲಿಯೇ ಪೋಷಕರ ಮುಂದೆ ಸನ್ಮಾನಿಸುವುದರ ಮೂಲಕ ಇಂತಹ ಒಳ್ಳೆಯ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡ ಕುರಿಯ ಒಕ್ಕೂಟಕ್ಕೆ ಅಭಿನಂದನೆ ಸಲ್ಲಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಕುರಿಯ ಇದರ ಅಧ್ಯಕ್ಷರಾದ ಹರೀಶ್ ಗೌಡ ಕರೆಜ್ಜ ಗ್ರಾಮದಲ್ಲಿ ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು, ಇದರ ಮೂಲಕ ಸಮುದಾಯವನ್ನು ಸಂಘಟಿಸಿ ಇಂತಹ ಸಮಾಜಮುಖಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಗ್ರಾಮದ ಎಲ್ಲಾ ಸಮಾಜ ಭಾಂದವರಿಗೆ ಅಭಿನಂದನೆ ತಿಳಿಸಿದರು.
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೇಲ್ವಿಚಾರಕಾರದ ವಿಜಯ ಕುಮಾರ್ ಮಾತನಾಡಿದರು.ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಆನಂದ ಗೌಡ ನೈತಾಡಿ, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಕಾರ್ಯದರ್ಶಿ ದಯಾನಂದ ಕೆ ಎಸ್,ಸುರೇಶ್ ಗೌಡ , ತಾಲೂಕು ಮಹಿಳಾ ಸಂಘದ ಕಾರ್ಯದರ್ಶಿ ಸಂಧ್ಯಾ ಶಶಿಧರ್,ಒಕ್ಕಲಿಗ ಗೌಡ ಗ್ರಾಮ ಸಮಿತಿ ಅಧ್ಯಕ್ಷರಾದ ರಮಾನಾಥ ಗೌಡ ಸಂಪ್ಯ ಬೈಲಾಡಿ,ಟ್ರಸ್ಟ್ ನ ಪ್ರೇರಕರಾದ ಶ್ರೀಕಾಂತ್ ಗೌಡ ಯುವ ಘಟಕದ ಅಧ್ಯಕ್ಷರಾದ ರಾಜೇಶ್ ಕೈಂತಿಲ ಉಪಸ್ಥಿತರಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪುಸ್ತಕ ವಿತರಣೆ
2021-2022 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ನಲ್ಲಿ ಸಾಧನೆಗೈದ ಸಂಪ್ಯಾ ಬೈಲಾಡಿ ಶಿನಪ್ಪ ಗೌಡ ಪುಷ್ಪವತಿ ದಂಪತಿಗಳ ಪುತ್ರಿ ಯಶಸ್ವಿನಿ,ಸಂಪ್ಯಾ ಬೈಲಾಡಿ ರವಿ ಗೌಡ ಶೀಲಾವತಿ ದಂಪತಿಗಳ ಪುತ್ರಿ ಪೂರ್ಣಲಕ್ಷ್ಮಿ, ಹಾಗೂ MCA ನಲ್ಲಿ ಪ್ರಥಮ ರಾಂಕ್ ಪಡೆದಿರುವ ಪ್ರಸ್ತುತ ಮಂಜುನಾಥೇಶ್ವರಾ ಕಾಲೇಜ್ ಉಜಿರೆಯಲ್ಲಿ ಪ್ರೊಫೆಸರ್ ಆಗಿರುವ ನೈತಾಡಿ ಸುಭಾಷ್ ಗೌಡ ಹಾಗೂ ಯಶೋದ ದಂಪತಿಗಳ ಪುತ್ರಿ ಸುಶ್ಮಿತಾ ಹಾಗೂ ಕ್ರೀಡಾ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಂಪ್ಯಾಬೈಲಾಡಿ ಮಂಜಪ್ಪ ಗೌಡ ಹಾಗೂ ರೂಪ ದಂಪತಿಗಳ ಪುತ್ರ ನಿಶಾಂತ್ ಗೌಡ ಹಾಗೂ ಪುತ್ರಿ ನಿಶಾ ಬಿ ಯಂ, ಹಾಗೂ ದಾಮಯ್ಯ ಗೌಡ ಗಡಾಜೆ ಮತ್ತು ಶೀಲಾವತಿ ದಂಪತಿಗಳ ಪುತ್ರರಾದ ರಕ್ಷಿತ್ ಡಿ ಜಿ, ಹರ್ಷಿತ್ ಡಿ ಜಿ,ಆಮ್ಮುಂಜ ಶಿನಪ್ಪ ಗೌಡ ದೇವಿಕಾ ದಂಪತಿಗಳ ಪುತ್ರರಾದ ರಿತೇಶ್ ಅಮ್ಮುಂಜ,ವಿನಿತ್ ಅಮ್ಮುಂಜ, ಕೃಷ್ಣ ರಾಧಿಕಾ ಹಾಗೂ ಸೌಮ್ಯ ಕೆ ಎನ್ ದಂಪತಿಗಳು ಪುತ್ರರಾದ ಸ್ವರೂಪ್ ಕೃಷ್ಣ ಮತ್ತು ಚರಣ್ ಕೃಷ್ಣ ಇವರುಗಳನ್ನು ಶಾಲು ಹೊದಿಸಿ, ಹಾರ ಸ್ಮರಣಿಕೆ ,ಹೂಗುಚ್ಚ ನೀಡಿ ಗೌರವಿಸಲಾಯಿತು.ಹಾಗೂ ಗ್ರಾಮದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಿತು.
ಊರು ಗೌಡರುಗಳಿಗೆ ಗೌರವಾರ್ಪಣೆ
ಕುರಿಯ ಗ್ರಾಮದಲ್ಲಿ ಗೌಡತ್ತಿಗೆ ನಡೆಸುತ್ತಿರುವ ಊರು ಗೌಡರುಗಳಾದ ಸಂಪ್ಯಾ ಬೈಲಾಡಿ ಶೇಷಪ್ಪ ಗೌಡ,ಹೊಸಮಾರು ಲಿಂಗಪ್ಪ ಗೌಡ, ಗಡಾಜೆ ಪುರುಷೋತ್ತಮ ಗೌಡ ಇವರುಗಳನ್ನು ಶಾಲು ಹೊದಿಸಿ,ಹಾರ ಹಾಕಿ ಸ್ಮರಣಿಕೆ,ಹೂ ನೀಡಿ ಗೌರವಿಸಲಾಯಿತು,ಹಾಗೂ ಕಾರ್ಯಕ್ರಮ ನಿರೂಪಿಸಿದ ಶಿಕ್ಷಕಿ ಕಾವ್ಯ ಗೌಡ ಗಡಾಜೆ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಹಾಯಧನ ವಿತರಣೆ
ಪ್ರಕೃತಿ ಒಕ್ಕಲಿಗ ಸ್ವ ಸಹಾಯ ಸಂಘ ಕರೆಜ್ಜ ಕುರಿಯ ಇದರ ಸದಸ್ಯರಾದ ಜಲಜಾಕ್ಷಿ ಇವರ ಪತಿ ಅನಾರೋಗ್ಯದಿಂದ ಬಲಳುತ್ತಿದ್ದ ಇವರ ಕುಟುಂಬಕ್ಕೆ ಪ್ರಕೃತಿ ಒಕ್ಕಲಿಗ ಸ್ವ ಸಹಾಯ ಸಂಘದ ಸದಸ್ಯರು ಸಂಗ್ರಹಿಸಿದ್ದ ಧನಸಹಾಯ ಮೊತ್ತವನ್ನು ಇದೆ ಸಂದರ್ಭದಲ್ಲಿ ಸದಸ್ಯೆ ಜಲಜಾಕ್ಷಿ ಇವರಗೆ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿಶಾ ಗೌಡ ಪ್ರಾರ್ಥಿಸಿದರು, ಒಕ್ಕಲಿಗ ಸ್ವ ಸಹಾಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪುಷ್ಪವತಿ ಆನಂದ ಗೌಡ ನೈತಾಡಿ ಸ್ವಾಗತಿಸಿದರು,ಚಂದ್ರ ಎಸ್ ಸಂಪ್ಯ ಬೈಲಾಡಿ ವಂದಿಸಿದರು, ಕಾವ್ಯ ಗೌಡ ಗಡಾಜೆ ಕಾರ್ಯಕ್ರಮ ನಿರ್ವಹಿಸಿದರು