ತಿಂಗಳಾಡಿ: ಕಟ್ಟಡ ಕಾರ್ಮಿಕರಿಗೆ, ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ, ಕೆದಂಬಾಡಿ ಗ್ರಾಮ ಪಂಚಾಯತ್ ರೋಟರ್‍ಯಾಕ್ಟ್ ಕ್ಲಬ್ ತಿಂಗಳಾಡಿ, ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ ಇವುಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ.18 ರಂದು ತಿಂಗಳಾಡಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ರೋಟರ್‍ಯಾಕ್ಟ್ ಕ್ಲಬ್ ಅಧ್ಯಕ್ಷ ಪ್ರದ್ದಿನ್ ರೈ,ಕೆ, ಸಭಾಪತಿ ನಿಶಾಂತ್ ರೈ, ಮಂಗಳೂರು ಕೆ.ಎಂ.ಸಿ ವೈದ್ಯರಾದ ಡಾ. ಬೇನ್ಜಿ, ಸೋಶಿಯಲ್ ಸಲಹೆಗಾರ ಸುಭ್ರಮಣಿ, ಲ್ಯಾಬ್‌ನ ಉಮೇಶ್‌ರವರುಗಳು ಅರೋಗ್ಯ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿದರು. ಕೆನರಾ ವಲಯ ಜೊತೆ ಕಾರ್ಯದರ್ಶಿ ಹರೀಶ್ ರೈ, ರೋಟರ್‍ಯಾಕ್ಟ್ ನಿಕಟ ಪೂರ್ವ ಅಧ್ಯಕ್ಷ ಅನೀಶ್ ಶೆಟ್ಟಿ ,ವೃತ್ತಿ ಸೇವಾ ವಿಭಾಗ ನಿರ್ದೇಶಕ ವರುಣು ಕುಮಾರ್ , ಕಾರ್ಯಕ್ರಮದ ಆಯೋಜಕ ರತ್ನಾಕರ ರೈ, ಅಭಿನಂದನ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸತೀಶ್ ರೈ ಮಿತ್ತೋಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿಉಪಸ್ಥಿತರಿದ್ದರು.

ಬೆಳಿಗ್ಗೆಯಿಂದ ಸಂಜೆ ತನಕ ನಡೆದ ಶಿಬಿರದಲ್ಲಿ ಒಟ್ಟು 111 ಜನರ ಅರೋಗ್ಯ ತಪಾಸಣೆ ನಡೆಸಲಾಯಿತು. ಒಟ್ಟು 13 ಜನ ಲ್ಯಾಬ್ ಟೆಕ್ನಿಷನ್ ಸಹಕರಿಸಿದ್ದರು. ಅಭಿನಂದನ್ ಸ್ಪೋರ್ಟ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷ ರವಿಕುಮಾರ್ ರೈ ಕೆದಂಬಾಡಿಮಠ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here