ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ

0

ರೂ.1,15,034 ನಿವ್ವಳ ಲಾಭ,38 ಪೈಸೆ ಬೋನಸ್, ಶೇ.10 ಡೆವಿಡೆಂಡ್

ಗುಣಮಟ್ಟದ ಹಾಲು ಪೂರೈಕೆಯಿಂದ ಸಂಘದ ಬೆಳವಣಿಗೆ- ವಿನೋದ್ ರೈ

ಸವಣೂರು : ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿನೋದ್ ಪಿ.ರೈ ಮಾತನಾಡಿ, ವರದಿ ಸಾಲಿನಲ್ಲಿ ಸಂಘವು ವಾರ್ಷಿಕ ವ್ಯವಹಾರದಲ್ಲಿ 1,15,034 ರೂ. ನಿವ್ವಳ ಲಾಭ ಗಳಿಸಿದ್ದು,ಅಡಿಟ್ ವರ್ಗೀಕರಣದಲ್ಲಿ ಎ ದರ್ಜೆ ಪಡೆದಿದೆ.ಈ ಬೆಳವಣಿಗೆಗೆ ಕಾರಣವಾದ ಎಲ್ಲಾ ಸದಸ್ಯರನ್ನು ಅಭಿನಂದಿಸುವುದಾಗಿ ಹೇಳಿದರು. ಸದಸ್ಯರಿಗೆ ಪ್ರತೀ ಲೀಟರ್‌ಗೆ 38 ಪೈಸೆ ಬೋನಸ್ ಹಾಗೂ ಶೇ.10 ಡೆವಿಡೆಂಡ್ ನೀಡಲಾಗುವುದು,ಸದಸ್ಯರು ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಸಿ ಸಂಘದ ಬೆಳವಣಿಗೆಗೆ ಕಾರಣರಾಗಿದ್ದು, ಹೆಚ್ಚು ಹಾಲು ಹಾಕುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕು ಎಂದರು.

ಸಂಘಕ್ಕೆ ಸ್ವಂತ ಕಟ್ಟಡ ಬೇಕು:

ಸಂಘಕ್ಕೆ ಸ್ವಂತ ಕಟ್ಟಡ ಬೇಕು,ಈ ಕುರಿತು ಸಂಘದ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಸದಸ್ಯ,ಪೆರುವಾಜೆ ಗ್ರಾ.ಪಂ.ಸದಸ್ಯ ಸಚಿನ್‌ರಾಜ್ ಶೆಟ್ಟಿ ಹೇಳಿದರು. ಅಧ್ಯಕ್ಷ ವಿನೋದ್ ರೈ ಮಾತನಾಡಿ,ಈ ಕುರಿತು ಈಗಾಗಲೇ ಪ್ರಯತ್ನ ನಡೆಯುತ್ತಿದೆ ಎಂದರು.

ದರ ಹೆಚ್ಚಳಕ್ಕೆ ಮನವಿ:

ಹಾಲು ಉತ್ಪಾದಕರಿಗೆ ಪ್ರಸ್ತುತ ನೀಡುತ್ತಿರುವ ಬೆಲೆಯನ್ನು ಹೆಚ್ಚಿಸಬೇಕು.ಪಶು ಆಹಾರದ ಬೆಲೆಗಳು ಹೆಚ್ಚಳವಾಗುತ್ತಿರುವುದರಿಂದ ಹಾಲಿನ ಬೆಲೆಯನ್ನೂ ಏರಿಸುವ ಕುರಿತಂತೆ ಒಕ್ಕೂಟಕ್ಕೆ ಹಾಗೂ ಸರಕಾರಕ್ಕೆ ಪತ್ರಬರೆಯಬೇಕು ಎಂದು ಉಪಾಧ್ಯಕ್ಷ ಎನ್.ಎಸ್.ವೆಂಕಪ್ಪ ಗೌಡ ಪೆರ್ಜಿ ಹೇಳಿದರು.ಸಚಿನ್ ರಾಜ್ ಶೆಟ್ಟಿ ಅವರೂ ಧ್ವನಿಗೂಡಿಸಿದರು.

ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ,ಸಂಘದ ಹೆಸರಿನಲ್ಲಿ ಸ್ವಂತ ನಿವೇಶನ ಹೊಂದಿದ್ದರೆ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದ ವತಿಯಿಂದ ಅನುದಾನ ದೊರಕಲಿದೆ.ಒಕ್ಕೂಟದ ರೈತ ಕಲ್ಯಾಣ ನಿಧಿಯಿಂದ ಆಕಸ್ಮಿಕ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಸಹಾಯ ಪಡೆಯುವ ಅವಕಾಶ ಮತ್ತು ರೈತರ ಮಕ್ಕಳಿಗೆ ಕೃಷಿ ಹಾಗೂ ಹೈನುಗಾರಿಕೆ,ಪಶುವೈದ್ಯಕೀಯಕ್ಕೆ ಸಂಬಂಧಪಟ್ಟಂತೆ ಉನ್ನತ ಶಿಕ್ಷಣಕ್ಕೆ ಸಹಾಯ ದೊರಕುತ್ತದೆ. ಹಾಲಿನ ಗುಣಮಟ್ಟದ ಮೇಲೆ ದರ ನೀಡುವುದರಿಂದ ಹಾಲಿನ ಗುಣಮಟ್ಟದ ಕುರಿತು ವಿಶೇಷ ಗಮಹರಿಸಬೇಕು ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಎಸ್.ವೆಂಕಪ್ಪ ಗೌಡ,ನಿರ್ದೇಶಕರಾದ ಪ್ರವೀಣ್ ಕುಮಾರ್ ರೈ ನಳೀಲು,ಸದಾಶಿವ ರೈ ಬಾಕಿಜಾಲು,ಸುಬ್ಬಣ್ಣ ದಾಸ್ ಚೆನ್ನಾವರ,ಸುಂದರ,ಸೈಯ್ಯದ್ ಮೊಯ್ದೀನ್ ,ಇಬ್ರಾಹಿಂ,ಸಿ.ಪಿ.ಪ್ರೇಮಲತಾ ರೈ,ಪ್ರೇಮ ಕೆ.ಜಿ.,ನೀಲಮ್ಮ ಉಪಸ್ಥಿತರಿದ್ದರು.

ಸಂಘದಲ್ಲಿ ಹೆಚ್ಚು ಹಾಲು ಪೂರೈಸಿದವರಲ್ಲಿ ಎನ್.ಎಸ್.ವೆಂಕಪ್ಪ ಗೌಡ ಪ್ರಥಮ,ಕಸ್ತೂರಿನಾಥ ಶೆಟ್ಟಿ ದ್ವಿತೀಯ ಬಹುಮಾನ ಪಡೆದುಕೊಂಡರು.ಉಳಿದ ಸದಸ್ಯರಿಗೆ ಸ್ಟೀಲ್ ಪಾತ್ರೆ ನೀಡಲಾಯಿತು.

ಸಂಘದ ಕಾರ್ಯದರ್ಶಿ ಮೋಹನ ಗೌಡ ಬಿ.ಅವರು ವಾರ್ಷಿಕ ವರದಿ ಮಂಡಿಸಿದರು. ಹಾಲು ಪರೀಕ್ಷಕಿ ವನಜ ಬಿ.ಅವರು ಸಹಕರಿಸಿದರು.ಸೈಯ್ಯದ್ ಗಫೂರ್ ಸಾಹೇಬ್ ಅವರು ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here