ಕಾಣಿಯೂರು ಗ್ರಾ.ಪಂ.ಸಾಮಾನ್ಯ ಸಭೆ : ಹಂಚಿಕೆಯಾದ ನಿವೇಶನದಲ್ಲಿನ ಹೆಚ್ಚುವರಿ ಜಾಗವನ್ನು ಗ್ರಾ.ಪಂ. ಸ್ವಾಧೀನ ಪಡೆಯಲು ನಿರ್ಣಯ 

0

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸುರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಅಬ್ಬಡ ಎಂಬಲ್ಲಿ ನಿವೇಶನ ಹಂಚಿಕೆಯಾದ ಜಾಗವನ್ನು ಹೊರತು ಹೆಚ್ಚುವರಿ ಜಾಗವನ್ನು ಗ್ರಾಮ ಪಂಚಾಯತ್ ಸ್ವಾಧೀನ ಪಡೆದುಕೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಲಾಗಿದೆ. ಬೊಬ್ಬೆಕೇರಿ ಎಂಬಲ್ಲಿ ಶಾಲಾ ಸಮೀಪ ರಸ್ತೆ ಬದಿಯಲ್ಲಿ ಬೇಲಿ ಹಾಕಿರುವ ಬಗ್ಗೆ ಸಾರ್ವಜನಿಕರು ಗ್ರಾಮ ಪಂಚಾಯತ್‌ಗೆ ದೂರು ನೀಡಿರುವ ಹಿನ್ನಲೆಯಲ್ಲಿ ಈಗಾಗಲೇ ವಿವೇಕ ಜಾಗೃತ ಬಳಗದವರಿಗೆ ಒಂದು ಬಾರಿ ನೋಟೀಸ್ ನೀಡಲಾಗಿದ್ದು, ಎರಡನೇ ಬಾರಿ ನೋಟಿಸ್ ನೀಡುವಂತೆ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ, ಸಮಾಜ ಮಂದಿರದ ಜಾಗವನ್ನು ಗಡಿ ಗುರುತು ಮಾಡಿ ಆರ್‌ಟಿಸಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಬರೆಯಲು ಲೋಕಯ್ಯ ಪರವ ಹೇಳಿದರು.

ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಪ್ರವೀಣ್‌ಚಂದ್ರ ರೈ ಕುಮೇರು, ವಸಂತ ಪೆರ್ಲೋಡಿ, ದೇವಿಪ್ರಸಾದ್ ದೋಳ್ಪಾಡಿ, ಲೋಕಯ್ಯ ಪರವ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ಸುನಂದ ಅಬ್ಬಡ, ಕೀರ್ತಿಕುಮಾರಿ ಅಂಬುಲ, ತೇಜಕುಮಾರಿ ಉದ್ಲಡ್ಡ, ಸುಲೋಚನಾ ಮಿಯೋಳ್ಪೆ, ಅಂಬಾಕ್ಷಿ ಕೂರೇಲು, ಗಂಗಮ್ಮ ಗುಜ್ಜರ್ಮೆ, ಮೀರಾ ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವರಾಜ್ ಸಭೆ ನಿರ್ವಹಿಸಿ ಇಲಾಖೆ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು. ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ಜಮಾಖರ್ಚು ವಿವರ ವಾಚಿಸಿದರು. ಸಿಬ್ಬಂದಿಗಳಾದ ಚಿತ್ರಾ, ಕುಮಾರ್, ಶಶಿಕಲಾ, ಕೀರ್ತಿ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here